Friday, May 3, 2024
spot_imgspot_img
spot_imgspot_img

ಧರ್ಮಸ್ಥಳ ಪರ ನಡೆದ ಪ್ರತಿಭಟನೆ; ಸೌಜನ್ಯ ಕುಟುಂಬದ ಮೇಲೆ ಹಲ್ಲೆ ಯತ್ನ -ಸೌಜನ್ಯ ಸಹೋದರನ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಟ

- Advertisement -G L Acharya panikkar
- Advertisement -
vtv vitla

ಉಜಿರೆ: ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಧರ್ಮಸ್ಥಳ ಕ್ಷೇತ್ರ, ವೀರೆಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಬಾರದು ಎಂದು ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಬೃಹತ್‌ ಸಮಾವೇಶ ನಡೆಯುತ್ತಿತ್ತು. ಈ ಸಮಾವೇಶಕ್ಕೆ ನ್ಯಾಯ ಕೇಳಿ ಸೌಜನ್ಯ ತಾಯಿ ಕೂಡ ಬಂದಿದ್ದು, ಜಸ್ಟೀಸ್‌ ಫಾರ್ ಸೌಜನ್ಯ ಎಂಬ ಭಿತ್ತಿಪತ್ರ ಹಿಡಿದು ಬಂದ ತಾಯಿ ಕುಸುಮಾವತಿಯನ್ನು ವೇದಿಕೆಗೆ ತೆರಳದಂತೆ ಪೊಲೀಸರು ತಡೆದಿರುವ ಘಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ, ‘ತನ್ನ ಮಗಳಿಗೆ ನ್ಯಾಯ ಬೇಕು’ ಎಂದು ವೇದಿಕೆ ಮುಂಭಾಗದಲ್ಲಿ ಘೋಷಣೆ ಕೂಗಿದ್ದಾರೆ. ಈ ವೇಳೆ, ಧರ್ಮಾಧಿಕಾರಿ ಬೆಂಬಲಿಗನೊಬ್ಬ ಪೊಲೀಸರ ಮುಂದೆಯೇ ಜಯರಾಮ್‌ಗೌಡ ಅವರ ಶರ್ಟ್‌ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಲು ಯತ್ನಿಸಿದ್ದಲ್ಲದೆ, ಬೆರಳು ತೋರಿಸಿ ಬೆದರಿಕೆವೊಡ್ಡಿದ್ದಾನೆ.

ಈ ವೇಳೆ ಮಾತನಾಡಿದ ಸೌಜನ್ಯ ತಾಯಿ, ನನ್ನ ಕುಟುಂಬ ಧರ್ಮಸ್ಥಳದ ವಿರುದ್ಧ ಇಲ್ಲ. ಸೌಜನ್ಯ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು. ಇಂದಿನ ಈ ಸಮಾವೇಶ ಸೌಜನ್ಯಗೆ ನ್ಯಾಯ ಸಿಗುವ ಬಗ್ಗೆ ಆಗಬೇಕಿತ್ತು. ಆದರೆ ಅದಾಗಲಿಲ್ಲ ಎಂದಿದ್ದಾರೆ. ಇದು ಸೌಜನ್ಯ ಪರ ಹೋರಾಟವಲ್ಲ. ಇಲ್ಲಿ ಯಾರೂ ಸೌಜನ್ಯ ಪರ ಪ್ಲೆಕಾರ್ಡ್‌ ಹಿಡಿದಿಲ್ಲ. ಘೋಷಣೆ ಕೂಗಿಲ್ಲ. ಸೌಜನ್ಯ ಪ್ರಕರಣ ದೇಶದ ಗಮನ ಸೆಳೆಯುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ಯಾಯಗಳು ಜಗತ್ತಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಹೋರಾಟ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ನ್ಯಾಯ ಕೇಳಿ ವೇದಿಕೆ ಬಳಿ ಬಂದಾಗ ಪೊಲೀಸರು ತಡೆದರು. ಸೌಜನ್ಯ ತಾಯಿ ಕುಸುಮಾವತಿ, ತಂಗಿ ಸೇರಿದಂತೆ ಅವರ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸೌಜನ್ಯ ಕುಟುಂಬಸ್ಥರನ್ನು ಸುತ್ತುವರಿದ ಪ್ರತಿಭಟನಾಕಾರರು, ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಜೈ, ವೀರೇಂದ್ರ ಹೆಗ್ಗಡೆಗೆ ಜೈ ಅಂದಿದ್ದು ಮಾತ್ರವಲ್ಲದೇ ಸೌಜನ್ಯ ಕುಟುಂಬದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

- Advertisement -

Related news

error: Content is protected !!