ಬಂಟ್ವಾಳ: ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ,ಲಾಕ್ ಡೌನ್ ಸಂದರ್ಭದ ವೇತನ ಪಾವತಿಸಿ,
ಕೊರೊನಾ ವಾರಿಯರ್ಸ್ ರನ್ನು ಖಾಯಂಗೊಳಿಸಿ,
ಎಲ್ಲಾ ಕಾರ್ಮಿಕರಿಗೆ ರೂ.7500 ಹಾಗೂ 10 ಕೆಜಿ ಆಹಾರಧಾನ್ಯಗಳನ್ನು ಮುಂದಿನ 6 ತಿಂಗಳವರೆಗೆ ಒದಗಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದೇಶವ್ಯಾಪಿ ಪ್ರತಿಭಟನೆ ಅಂಗವಾಗಿ ಜೆಸಿಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆಯನ್ನು ನಡೆಸಿ ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ನಾಯಕರಾದ ರಾಮಣ್ಣ ವಿಟ್ಲ, ಎಐಟಿಯುಸಿ ನಾಯಕರಾದ ಬಿ.ಶೇಖರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ವಿವಿಧ ಸಂಘಟನೆಗಳ ನಾಯಕರುಗಳಾದ ಸುರೇಶ್ ಕುಮಾರ್ ಬಂಟ್ವಾಳ, ಸುರೇಂದ್ರ ಕೋಟ್ಯಾನ್, ಪ್ರಭಾಕರ ದೈವಗುಡ್ಡೆ, ಲೋಲಾಕ್ಷಿ ಬಂಟ್ವಾಳ, ಮಹಮ್ಮದ್ ಇಕ್ಬಾಲ್ ಹಳೆಮನೆ, ಭಾರತಿ ಪ್ರಶಾಂತ್,ನ್ಯಾಯವಾದಿ ತುಳಸೀದಾಸ್ ವಿಟ್ಲ, ಬಿ.ನಾರಾಯಣ,ಬಾಸ್ಕರ್, ದಿನೇಶ್ ಆಚಾರಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.