Wednesday, December 4, 2024
spot_imgspot_img
spot_imgspot_img

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಉಡುಪಿ, ದ.ಕನ್ನಡ ಫಸ್ಟ್ ಜುಲೈ ಕೊನೆಯ ವಾರ ಪೂರಕ ಪರೀಕ್ಷೆ ದಿನಾಂಕ ಪ್ರಕಟ

- Advertisement -
- Advertisement -

ಫಲಿತಾಂಶಕ್ಕಾಗಿ ಇಲ್ಲಿ ?ಕ್ಲಿಕ್ ಮಾಡಿ

http://karresults.nic.in/indexPUC_2020.asp

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಶೇ.90.71 ಫಲಿತಾಂಶ ಪಡೆಯುವ ಮೂಲಕ ಉಡುಪಿ ಹಾಗೂ ದಕ್ಷಿಣ ಕನ್ನಡ ಮೊದಲ ಸ್ಥಾನವನ್ನು ಹಂಚಿಕೊಂಡಿದೆ. ಕೊನೆಯ ಸ್ಥಾನವನ್ನು ವಿಜಯಪುರ ಜಿಲ್ಲೆ (ಶೇ.54.22)ಪಡೆದುಕೊಂಡಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಿರುಹೊತ್ತಿಗೆ ಬಿಡುಗಡೆ ಮಾಡಿ, ಮಾತನಾಡಿದರು.

ಎಂದಿನಂತೆ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. 6,75,276 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 3,84,947 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಯಾವ ಜಿಲ್ಲೆಯಯಲ್ಲಿ ಎಷ್ಟು ಫಲಿತಾಂಶ..?

  1. ಉಡುಪಿ: ಶೇ. 90.71
  2. ದಕ್ಷಿಣ ಕನ್ನಡ: ಶೇ.90.71
  3. ಕೊಡಗು: ಶೇ.81.53
  4. ಉತ್ತರ ಕನ್ನಡ: 80.97
  5. ಚಿಕ್ಕ ಮಗಳೂರು: ಶೇ.79.11
  6. ಬೆಂಗಳೂರು ದಕ್ಷಿಣ: ಶೇ.77.56
  7. ಬೆಂಗಳೂರು ಉತ್ತರ:ಶೇ.75.54
  8. ಬಾಗಲಕೋಟೆ: ಶೇ.74.59
  9. ಚಿಕ್ಕಬಳ್ಳಾಪುರ: ಶೇ.73.74
  10. ಶಿವಮೊಗ್ಗ: ಶೇ.72.19
  11. ಹಾಸನ: ಶೇ.70.18
  12. ಚಾಮರಾಜನಗರ: ಶೇ.69.29
  13. ಬೆಂಗಳೂರು ಗ್ರಾಮಾಂತರ: ಶೇ.69.02
  14. ಹಾವೇರಿ: ಶೇ.68.61
  15. ಮೈಸೂರು: ಶೇ.67.98
  16. ಕೋಲಾರ: ಶೇ.67.42
  17. ಧಾರವಾಡ: 67.31
  18. ಬೀದರ್: ಶೇ.64.61
  19. ದಾವಣಗೆರೆ: ಶೇ. 64.09
  20. ಚಿಕ್ಕೋಡಿ: ಶೇ. 63.68
  21. ಮಂಡ್ಯ: ಶೇ .63.82
  22. ಗದಗ: ಶೇ .63
  23. ತುಮಕೂರು: ಶೇ .62.26
  24. ಬಳ್ಳಾರಿ: ಶೇ. 62.02
  25. ರಾಮನಗರ: ಶೇ .60.96
  26. ಕೊಪ್ಪಳ: ಶೇ .60.9
  27. ಬೆಳಗಾವಿ: ಶೇ.59.7
  28. ಯಾದಗಿರಿ: ಶೇ.58.38
  29. ಕಲಬುರಗಿ: 58.27
  30. ಚಿತ್ರದುರ್ಗ: ಶೇ.56.8
  31. ರಾಯಚೂರು: ಶೇ.56.22
  32. ವಿಜಯಪುರ: ಶೇ.54.22

ಯಾವ ವಿಭಾಗದಲ್ಲಿ ಎಷ್ಟು ಫಲಿತಾಂಶ..?
ಈ ಬಾರಿ ವಿಜ್ಞಾನ ವಿಭಾಗದಲ್ಲಿ ಶೇ.76.2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಇದರ ಪ್ರಮಾಣ ಶೇ. 66.58 ಇತ್ತು. ವಾಣಿಜ್ಯ ಶೇ.65.52 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಆದರೆ ಕಳೆದ ಇದರ ಪ್ರಮಾಣ ಶೇ. 66.39 ಇತ್ತು. ಇನ್ನು ಕಲಾ ವಿಭಾಗದಲ್ಲಿ ಶೇ.41.27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ ಇದರ ಪ್ರಮಾಣ ಶೇ. 61.73 ಇತ್ತು.

ಈ ಬಾರಿಗೂ ಬಾಲಕಿಯರೇ ಮೇಲುಗೈ
ಈ ವರ್ಷವೂ ಸಹ ಬಾಲಕಿಯರು ಶೇ.68.73 ರಷ್ಟು ಪಾಸ್ ಆಗಿದ್ದರೆ, ಬಾಲಕರ ಶೇ. 54.77 ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿದಿದ್ದರು. 3,33,985 ಬಾಲಕಿಯರು ಪರೀಕ್ಷೆ ಬರೆದಿದ್ದು ಈ ಪೈಕಿ 2,27,897 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, 3,37,668 ಬಾಲಕರು ಪರೀಕ್ಷೆ ಎದುರಿಸಿದ್ದು ಇವರಲ್ಲಿ 1,86,690 ಮಂದಿ ಪಾಸಾಗಿದ್ದರು.

- Advertisement -

Related news

error: Content is protected !!