ಪುಣಚ: ಶ್ರೀ ಉರಿಮಹಾಕಾಳಿ ದೈವಸ್ಥಾನ ಸೇವಾ ಟ್ರಸ್ಟ್(ರಿ) ಮೂರಿಬೆಟ್ಟು, ಪುಣಚ ಗ್ರಾಮದ ಪರಿಯಾಲ್ತಡ್ಕ ಮೂರಿಬೆಟ್ಟು ಶ್ರೀ ಉರಿಮಹಾಕಾಳಿ ದೈವಸ್ಥಾನದಲ್ಲಿ ಎ.21 ನೇ ಆದಿತ್ಯಾವಾರ ಮತ್ತು 22ನೇ ಸೋಮವಾರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನಾಗ ಪ್ರತಿಷ್ಕೆ ಹಾಗೂ ಶ್ರೀ ದೈವಗಳ ನೃತ್ಯೋತ್ಸವ ನಡೆಯಲಿದೆ.
ದಿನಾಂಕ: 21-04-2024 ನೇ ಆದಿತ್ಯಾವಾರ ಸಾಯಂ.5 ಗಂಟೆಗೆ : ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಆಗಮನ, ಸಿಂಗಾರಿಮೇಳದೊಂದಿಗೆ ಪೂರ್ಣಕುಂಭ ಸ್ವಾಗತ (ಮಹಿಷಮರ್ಧಿನಿ ಸಿಂಗಾರಿ ಮೇಳ ಪುಣಚ) ನಡೆದಿದೆ. ಬಳಿಕ 5.30 ರಿಂದ ಓಂಕಾರ ಭಜನಾ ವೃಂದ ಮುಳ್ಳೇರಿಯ ಪ್ರಜಿತ್ ಕಾಕುಂಜೆ ಮತ್ತು ಬಳಗದವರಿಂದ ಭಜನಾಮೃತ ನಡೆದು ರಾತ್ರಿ 7 ಗಂಟೆಗೆ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ , ರಾಕ್ಷೋಘ್ನ ಹೋಮ, ವಾಸ್ತು ಪುಣ್ಯಹಾಂತ ನಡೆದು ಬಳಿಕ 9 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ದಿನಾಂಕ: 22-04-2024ನೇ ಸೋಮವಾರ ಪೂರ್ವಾಹ್ನ 6 ಗಂಟೆಗೆ : ಗಣಪತಿ ಹೋಮ ನಡೆದು 8:29 ರಿಂದ 9:38 ರ ತನಕ ವೃಷಭ ಲಗ್ನ ಶುಭಮುರ್ಹೂದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮಕಲಶಾಭಿಶೇಕ ನಡೆದು 11 ಗಂಟೆಗೆ : ಹರಿಸೇವೆ, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆದು ಅಪರಾಹ್ನ 3 ಗಂಟೆಗೆ ಕುಟುಂಬದ ಮಹಿಳಾ ವೃಂದದವರಿಂದ ಭಜನೆ ನಡೆಯಲಿದೆ. 4.30ಕ್ಕೆ ಶ್ರೀ ವಿಷ್ಣುಮೂರ್ತಿ, ಧೂಮವತಿ ಭಜನಾ ಸಂಘ ವಿಷ್ಣುನಗ, ಕಿನ್ನಿಂಗಾರು ಇವರಿಂದ ಭಜನಾಮೃತ ನಡೆದು ಸಾಯಂ. 7 ಗಂಟೆಗೆ ಕೊರತ್ತಿ ಹಾಗೂ ಪಾಷಾಣಮೂರ್ತಿ ದೈವದ ಕೋಲ ನಡೆದು ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಬಳಿಕ 10 ಗಂಟೆಗೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ “ದೇವರ ನಾಮಗಳು” ಬಳಿಕ, 11 ಗಂಟೆಗೆ ಧರ್ಮದೈವ ಉರಿಮಹಾಕಾಳಿ ನೃತ್ಯೋತ್ಸವ ನಂತರ ರಕ್ತೇಶ್ವರಿ ದೈವದ ನೃತ್ಯೋವ ನಂತರ ರಕ್ತೇಶ್ವರಿ ದೈವದ ನೃತ್ಯೋತ್ಸವ ಸೂರ್ಯೋದಯದ ತನಕ ನಡೆಯಲಿದೆ.