Saturday, May 4, 2024
spot_imgspot_img
spot_imgspot_img

ಬಂಟ ಬ್ರಿಗೇಡ್ ಹೆಸರಿನಲ್ಲಿ ಕರಪತ್ರ ತಯಾರಿಸಿ ಜಾತಿಗಳ ಮಧ್ಯೆ ಗೊಂದಲ ಮೂಡಿಸುವ ಯತ್ನ; ಪಣೋಲಿಬೈಲು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆ

- Advertisement -G L Acharya panikkar
- Advertisement -

ಪಣೋಲಿಬೈಲು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದು ಹಿಂದುತ್ವದ ಭದ್ರಕೋಟೆಯನ್ನು ಚಿದ್ರಮಾಡುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಅಸ್ತಿತ್ವವೇ ಇಲ್ಲದೇ ಇರುವ ಬಂಟ ಬ್ರಿಗೇಡ್ ಎಂಬ ನಾಮದ ಅಡಿಯಲ್ಲಿ ಕರಪತ್ರ ತಯಾರಿಸಿ ಜಾತಿ ಜಾತಿಗಳ ಮದ್ಯೆ ಸಾಮರಸ್ಯ ಕದಡಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ.

ಈ ದುಷ್ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ತುಳುನಾಡಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಜೀಪಮೂಡ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥತರಿದ್ದರು.

- Advertisement -

Related news

error: Content is protected !!