- Advertisement -
- Advertisement -



ಪುಣೆ : 2012ರಲ್ಲಿ ಪುಣೆಯಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್ದಾರ್ ಅಲಿಯಾಸ್ ಅಸ್ಲಾಂ ಶಬ್ಬಿರ್ ಶೇಖ್ ನನ್ನು ಹತ್ಯೆ ಮಾಡಲಾಗಿದೆ. ಅನಾಮಿಕರ ಗುಂಡೇಟಿಗೆ ನಡುರಸ್ತೆಯಲ್ಲೇ ಉಗ್ರ ಉಸಿರು ನಿಲ್ಲಿಸಿದ್ದಾನೆ. ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಮಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2012ರ ಆಗಸ್ಟ್ 1 ರಂದು ಪುಣೆಯ ಜಂಗ್ಲಿ ಮಹಾರಾಜ್ ರಸ್ತೆ ಪ್ರದೇಶದಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿತ್ತು. ಬಂಟಿ ಜಹಾಗೀರ್ದಾರ್ ಹೆಸರು ಈ ಸ್ಪೋಟದಲ್ಲಿ ಕೇಳಿ ಬಂದಿತ್ತು.
ಶ್ರೀರಾಮಪುರದ ನಿವಾಸಿಯಾಗಿರುವ 52 ವರ್ಷ ಜಹಗೀರ್ದಾರ್, ಬೋರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಜಹಗೀರ್ದಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
- Advertisement -








