Tuesday, May 7, 2024
spot_imgspot_img
spot_imgspot_img

ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಬಜರಂಗದಳ ಆಗ್ರಹ – ಪುನೀತ್ ಅತ್ತಾವರ

- Advertisement -G L Acharya panikkar
- Advertisement -

ಮಂಗಳೂರು(ನ.13): ದೇಶದಾದ್ಯಂತ ಲವ್ ಜಿಹಾದ್ ನ ಪ್ರಕರಣಗಳು ಅಪಾಯಕಾರಿಯಾಗಿ ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ದ ಅಮಾಯಕ ಹಿಂದು ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದು ಸಮಾಜಕ್ಕೆ ಆತಂಕವನ್ನುಟುಮಾಡಿದೆ.

ಅದೇ ರೀತಿ ಮುಗ್ದ ಹಿಂದು ಹೆಣ್ಣುಮಕ್ಕಳಿಗೆ ಆಮಿಷಗಳ ಮೂಲಕ ಅವರನ್ನು ಪ್ರೀತಿ, ಪ್ರೇಮದ ನಾಟಕದ ಮೂಲಕ ಲವ್ ಜಿಹಾದಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇದನ್ನು ಕಡಿವಾಣ ಹಾಕಲು ಕಠಿಣ ಕಾನೂನು ಅವಶ್ಯಕತೆ ಇದ್ದು ಮಾನ್ಯ ಮುಖ್ಯಮಂತಿಗಳಿಗೆ ತಾವು ತಕ್ಷಣ ಲವ್ ಜಿಹಾದ್ ಮತಾಂತರದ ವಿರುದ್ಧ ಕಠಿಣ ಕಾನೂನು ತರಲು ಈ ಮೂಲಕ ಆಗ್ರಹಿಸುತಿದ್ದೇನೆ.

ನಮ್ಮ ಕಣ್ಣೆದುರು ನೂರಾರು ಹಿಂದು ಕುಟುಂಬಗಳು ಹೆಣ್ಣು ಮಕ್ಕಳನ್ನು ಮೋಸದ ಲವ್ ಜಿಹಾದಿಗೆ ಕಳೆದು ಕೊಂಡು ಕಣ್ಣೀರಿಟ್ಟರು ಇಂತಹ ಜಾಲಗಳಿಗೆ ಪದೇ ಪದೇ ನಮ್ಮ ಹೆಣ್ಣು ಮಕ್ಕಳು ಸಿಲುಕಿಕೊಳ್ಳುವುದು ಅತ್ಯಂತ ಬೇಸರದ ಸಂಗತಿ ಹಿಂದು ಸಮಾಜ ಎಚ್ಚೆತ್ತುಕೊಂಡು ಜಾಗೃತಿಯಾಗಬೇಕೆಂದು ಕೇಳಿಕೊಳ್ಳುತೇನೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

Related news

error: Content is protected !!