Thursday, April 25, 2024
spot_imgspot_img
spot_imgspot_img

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್ ವಿಧಿವಶ

- Advertisement -G L Acharya panikkar
- Advertisement -

ಪಂಜಾಬ್: ಪಂಜಾಬ್ ಮೂಲದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್ ಶನಿವಾರ ನಿಧನರಾಗಿದ್ದಾರೆ. ಇವರು ಇಂದಿರಾ ಗಾಂಧಿಯವರ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
86 ವರ್ಷದ ಬೂಟಾ ಸಿಂಗ್ ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದು, 2007-2010 ರವರೆಗೆ ಪರಿಶಿಷ್ಟ ವರ್ಗದ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದರು.


ಪತ್ರಕರ್ತರಾಗಿ ತಮ್ಮ ಜೀವನವನ್ನು ಆರಂಭಿಸಿದ ದಲಿತ ಸಮುದಾಯಕ್ಕೆ ಸೇರಿದ ಬೂಟಾ ಸಿಂಗ್, ನಂತರ ಅಕಾಲಿ ದಳ ಪಕ್ಷಕ್ಕೆ ಸೇರಿದರು. ಅಕಾಲಿ ದಳ ವಿಭಜನೆಯಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬೂಟಾ ಸಿಂಗ್, ಜವಹರಲಾಲ್ ನೆಹರೂ ಅವರ ಕಾಲದಿಂದಲೂ ಕಾಂಗ್ರೆಸ್‌ನಲ್ಲಿದ್ದು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರಿಗೆ ಅಪ್ತರಾಗಿದ್ದರು.

ಕಾಂಗ್ರೆಸ್ ಸಂಪುಟದಲ್ಲಿ ವಿವಿಧ ಹುದ್ದೆಗಳನ್ನು ವಹಿಸಿಕೊಂಡಿದ್ದರು. 1978-80 ರಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಇಂದಿರಾ ಗಾಂಧಿಯವರ ಆಡಳಿತದಲ್ಲಿ ರಾಷ್ಟ್ರಪತಿ ಹುದ್ದೆಗೂ ಇವರ ಹೆಸರು ನಾಮ ನಿರ್ದೇಶನವಾಗಿತ್ತು.

ಇಂದಿರಾ ಗಾಂಧಿಯವರ ಆಡಳಿತದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್‌ ಮೇಲೆ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ನಡೆಸಿದ ನಂತರ ಇದಕ್ಕೆ ಕಾರಣ ಕರ್ತರಾದ ಇಂದಿರಾಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರೇ ಕೊಂದಿದ್ದರು. ಈ ಸಂದರ್ಭದಲ್ಲಿ ಅಂದು ಕೇಂದ್ರ ಸಚಿವರಾಗಿದ್ದ ಬೂಟಾ ಸಿಂಗ್ ಕ್ಷಮೆ ಕೇಳಬೇಕಾದ ಸಂದರ್ಭ ಎದುರಾಗಿತ್ತು. ಅದರಂತೆ ಕ್ಷಮೆ ಕೇಳಿದ್ದರು. ಇದನ್ನು ಸಹಿಸಲಾರದ ಸಿಖ್ ಸಮುದಾಯ, ಪಂಜಾಬ್‌ನ ದಲಿತ ಸಿಖ್ಖರಾದ ಬೂಟಾ ಸಿಂಗ್ ಅವರಿಗೆ ಮಂದಿರಕ್ಕೆ ಬರುವವರ ಬೂಟ್ ಪಾಲಿಶ್ ಮಾಡುವ ಶಿಕ್ಷೆ ವಿಧಿಸಿತ್ತು. ಇದನ್ನೂ ಸಹ ಅವರು ಮಾಡಿದ್ದರು.

- Advertisement -

Related news

error: Content is protected !!