Tuesday, July 21, 2026
spot_imgspot_img
spot_imgspot_img

ಪೂರ್ಲಪ್ಪಾಡಿ ಶ್ರೀ ಮಲರಾಯಿ, ಪಿಲಿಚಾಮುಂಡಿ, ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್‍ ಪ್ರತಿಷ್ಠೆ-ಜಾತ್ರಾ ಮಹೋತ್ಸವ

- Advertisement -
- Advertisement -

ವಿಟ್ಲ ಪಡ್ನೂರು: ಪೂರ್ಲಪ್ಪಾಡಿ ಶ್ರೀ ಮಲರಾಯಿ, ಪಿಲಿಚಾಮುಂಡಿ, ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್‍ ಪ್ರತಿಷ್ಠೆ-ಜಾತ್ರಾ ಮಹೋತ್ಸವವು ಏಪ್ರಿಲ್ 29 ರಿಂದ ಮೇ 4 ರವರೆಗೆ ನಡೆಯಲಿದೆ.

ಮೇ 1 ಶುಕ್ರವಾರ ಬೆಳಿಗ್ಗೆ 6:30 ರಿಂದ: ಮಹಾಗಣಪತಿ ಹೋಮ, ಸುಮುಹೂರ್ತಕ್ಕೆ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಕಲಶಾಭಿಷೇಕ, ತಂಬಿಲ ಸೇವೆ, ನಿತ್ಯ ನೈಮಿತ್ತಿಗಳ ನಿರ್ಣಯ, ಪ್ರಾರ್ಥನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 5 ಕ್ಕೆ ಕಾಪುಮಜಲುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು. ಸಂಜೆ ಗಂಟೆ 7ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ.

ಮೇ 2 ಶನಿವಾರ ರಿಂದ ಮೇ 4 ರವರೆಗೆ ಬೆಳಿಗ್ಗೆ ಗಂಟೆ 8:30 ರಿಂದ ಶ್ರೀ ಮಲರಾಯ ದೈವ ಹಾಗೂ ಪಿಲಿಚಾಮುಂಡಿ ದೈವಗಳ ನೇಮ.
​ಮಧ್ಯಾಹ್ನ ಗಂಟೆ 12:30ಕ್ಕೆ ಅನ್ನಸಂತರ್ಪಣೆ. ಮಧ್ಯಾಹ್ನ ಗಂಟೆ 3ಕ್ಕೆ ಶ್ರೀ ಮಲರಾಯ ದೈವದ ಭಂಡಾರ ಕಾಪುವಿಗೆ ಹೊರಡುವುದು.
​ಸಂಜೆ ಗಂಟೆ 5ರಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು – ಧರ್ಮದೈವ ರುದ್ರಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು – ನೇಮ. ​ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ.

ಏಪ್ರಿಲ್ 29 ಬುಧವಾರ ಸಂಜೆ ಗಂಟೆ 4:00ಕ್ಕೆ: ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ(ಸ್ಥಳ: ವಿಷ್ಣುಮೂರ್ತಿ ದೇವಸ್ಥಾನ ಕಡಂಬಿನಿಂದ)

ಏಪ್ರಿಲ್ 30 ಗುರುವಾರ ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಶಿಲ್ಪಿ ಆಚಾರಿ, ಮೇಸ್ತ್ರಿಗಳಿಂದ ನೂತನ ಗುಡಿಗಳ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ, ನೂತನ ಮೃಗ ಆಯುಧಗಳ ಜಲಾಧಿವಾಸ ಪ್ರಾಯಶ್ಚಿತ್ತ ಹೋಮ.
​ಮಧ್ಯಾಹ್ನ ಗಂಟೆ 1 ಕ್ಕೆ ಅನ್ನಸಂತರ್ಪಣೆ. ಸಂಜೆ ಗಂಟೆ 5ರಿಂದ ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ಧ್ಯಾನಾಧಿವಾಸ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಸಾದ ಪೂಜೆ, ಪ್ರಾಕಾರ ಬಲಿ. ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!