- Advertisement -
- Advertisement -


ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಹಲವು ಗಂಟೆಗಳ ಕಾಲ ಗೌಪ್ಯವಾಗಿ ಜಿಲ್ಲಾಧ್ಯಕ್ಷ ಜೊತೆಗೆ ಸಭೆಯು ಶುಕ್ರವಾರ ಸಂಜೆ ನಡೆಯಿತು.
ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಲೋಕಸಭಾ ಚುನಾವಣೆಯ ತಯಾರಿಯ ಬಗ್ಗೆ ಚರ್ಚೆ ನಡೆಸಿದೆವು ಹಾಗೂ ಎಲ್ಲಾ ಸಂಘ ಪರಿವಾರದವರು ಜೊತೆಗೂಡಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಧರಿಸಿದೆವು. ಎಂದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ನಾವು ಪ್ರಚಾರ ಮಾಡಿದ್ದಲ್ಲ ಮಾಧ್ಯಮದವರು ಪ್ರಚಾರ ಕೊಟ್ಟದ್ದು ಎಂದು ಹೇಳಿದರು.
ಬಿಜೆಪಿ ಹಾಗೂ ಪುತ್ತಿಲ ಪರಿವಾರ ಇನ್ನು ಒಂದು ಒಮ್ಮತಕ್ಕೆ ಬರಲು ವಿಫಲವಾಗಿದೆ ಎನ್ನುವುದು ದೃಢಗೊಂಡಿದೆ. ಎರಡು ಬಣಗಳು ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಪುತ್ತಿಲ ವಿಚಾರವಾಗಿ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.
.
- Advertisement -








