Friday, June 5, 2026
spot_imgspot_img
spot_imgspot_img

ಪುತ್ತೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

- Advertisement -
- Advertisement -

ಪುತ್ತೂರು: ಕೋರ್ಟ್‌ ಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಬಸಿರಡ್ಕ ನಿವಾಸಿ ಸಂದೇಶ್‌ ಕೆ.ಎಸ್‌ (32) ಬಂಧಿತ ಆರೋಪಿ.

ಸಂದೇಶ್‌ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ .ಸಂದೇಶ ವಿದೇಶದಿಂದ ಊರಿಗೆ ಮರಳುತ್ತಿರುವ ಬಗ್ಗೆ, ಮಾಹಿತಿ ಅರಿತ ಪೊಲೀಸರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದಲ್ಲೇ ವಶಕ್ಕೆ ಪಡೆದುಕೊಂಡು ಪುತ್ತೂರಿಗೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪುತ್ತೂರು : ಕೊಲೆಯತ್ನ ಪ್ರಕರಣದ 2ನೇ ಆರೋಪಿಯಾಗಿರುವ ಪೋಳ್ಯ ನಿವಾಸಿ ಇರ್ಷಾದ್ ಇವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ 47/2019 ಕಲಂ: 143,147,148,341,504,323,324,326,307 ಜೊತೆಗೆ 149ಐಪಿಸಿ ಪ್ರಕರಣದಲ್ಲಿ ಎ.2ಆರೋಪಿಯಾಗಿದ್ದ ಪೋಳ್ಯ ನಿವಾಸಿ ಇರ್ಷಾದ್ ಇವರು ಪ್ರಕರಣದ ನಂತರ ದುಬೈಗೆ ತೆರಳಿ ತಲೆಮರೆಸಿಕೊಡಿದ್ದನು.

ಇದೀಗ ದುಬೈಯಿಂದ ಮರಳಿ ಬಂದ ವೇಳೆ ಮಂಗಳೂರು ಬಜಪೆ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಾರೆಂಟಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು , ಆರೋಪಿಗೆ ನವೆಂಬರ್10ರ ತನಕ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

vtv vitla
- Advertisement -

Related news

error: Content is protected !!