Tuesday, May 7, 2024
spot_imgspot_img
spot_imgspot_img

ಪುತ್ತೂರು: ಬಿಜೆಪಿ ಬೂತ್ ಅಧ್ಯಕ್ಷನ ಮನೆಗೆ ನುಗ್ಗಿ ದಾಂಧಲೆ ಜೀವ ಬೆದರಿಕೆ ಪ್ರಕರಣ; ಗಡಿಪಾರು ಮಾಡುವಂತೆ ಪುತ್ತೂರು ಬಿಜೆಪಿ ವತಿಯಿಂದ ಆಗ್ರಹ..!

- Advertisement -G L Acharya panikkar
- Advertisement -

ಪುತ್ತೂರು: ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿ ಪುತ್ತೂರು ಬಿಜೆಪಿ ವತಿಯಿಂದ ಸಹಾಯಕ ಆಯುಕ್ತರು / ಸಹಾಯಕ ಚುನಾವಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹೊರಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪುತ್ತೂರು ಕ್ಷೇತ್ರದ ಶಾಸಕರು ಸುಮಾರು 1400 ಕೋಟಿ ರೂ. ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ದಯಾನಂದ ಅವರು ಕಾಮಗಾರಿ ನಡೆದಿಲ್ಲ, ಅನುದಾನ ಬಂದಿಲ್ಲ, ಎಂದೆಲ್ಲ ಸಾಮಾಜಿಕ ಜಾಲತಾಣ ಫೇಸ್ಟುಕ್ ನಲ್ಲಿ ಈ ಕುರಿತು ನಿರಂತರವಾಗಿ ವ್ಯಂಗ್ಯವಾಗಿ ಬರೆಯುತ್ತಿರುವುದಾಗಿ ತಂಡವೊಂದು ಅವರ ಮನೆಗೆ ಚೆಂಡೆ, ಬ್ಯಾಂಡಿನೊಂದಿಗೆ ತೆರಳಿ ಶಾಸಕರು ತಂಡ ಅನುದಾನ, ನಡೆದ ಕಾಮಗಾರಿಗಳ ಬ್ಯಾನರ್ ಪ್ರದರ್ಶಿಸಿ ಮಾಹಿತಿ ನೀಡಲಾರಂಭಿಸಿದ ವೇಳೆ ಚರ್ಚೆ, ಮಾತಿನ ಚಕಮಕಿ ನಡೆದಿತ್ತು.

ಈ ಘಟನೆಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಈ ಘಟನೆಯ ಬಗ್ಗೆ ಜಯಾನಂದ ರವರು ಮಾ.17 ರಂದು ಪುತ್ತೂರು ನಗರ ಠಾಣೆಯಲ್ಲಿ ಪುಜ್ವಲ್ ರೈ, ಸನತ್ ರೈ ಮತ್ತು ಇನ್ನೂ 15 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದು, ಸದ್ರಿ ವ್ಯಕ್ತಿಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಚುನಾವಣಾ ಸಂಧರ್ಭದಲ್ಲಿ ಪುತ್ತೂರಿನಲ್ಲಿ ಈ ರೀತಿಯ ಘಟನೆಗಳು ಜರಗುವುದು ತಾಲೂಕಿನ ಮತದಾರರಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಲ್ಲಿ ಭಯದ ವಾತಾವರಣವನ್ನು ಮೂಡಿಸಿದೆ. ಇಂತಹ ಘಟನೆಯಿಂದ ಜನರು ಭಯದಿಂದ ಈ ರೀತಿಯ ಘಟನೆಗಳು ಜೀವಿಸುವಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಕೂಡಲೇ ಚುನಾವಣೆ ಮುಗಿಯುವ ತನಕ ಗಡಿಪಾರು ಮಾಡಲು ಆದೇಶಿಸಬೇಕು.

ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಮತ್ತು ಪುತ್ತೂರು ತಾಲೂಕು ಜನರಿಗೆ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ರಕ್ಷಣೆಯನ್ನು ನೀಡಬೇಕು, ಮತ್ತು ಇಂತಹ ಚುನಾವಣಾ ಅಕ್ರಮ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಲೋಕಸಭಾ ಚುನಾವಣೆಯು ಪಾರದರ್ಶಕ ಗಲಭೆ ಮುಕ್ತವಾಗಿ ನಡೆಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಗೋಪಾಲಕೃಷ್ಣ ಹೇರಳೆ, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ ಈ ವೇಳೆ ಉಪಸ್ಥಿತರಿದ್ದರು.

- Advertisement -

Related news

error: Content is protected !!