Sunday, June 7, 2026
spot_imgspot_img
spot_imgspot_img

ಸುಳ್ಯ: ಮೊಬೈಲ್ ರಿಚಾರ್ಚ್‌ಗೆ ಬಂದ ಯುವತಿಯ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕ; ಪೊಲೀಸ್ ಠಾಣೆಯಲ್ಲಿ ವಿಚಾರಣೆ..!

- Advertisement -
- Advertisement -

ಸುಳ್ಯ: ಏ‌ರ್ ಟೆಲ್ ಶೋ ರೋಂ ಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ವಿರುದ್ಧ ಯುವತಿಯ ಮನೆಯವರು ಪೋಲಿಸರಿಗೆ ದೂರು ನೀಡಿದ ಸುಳ್ಯದಲ್ಲಿ ನಡೆದಿದೆ.

ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ಮೊಬೈಲ್ ರಿಚಾರ್ಜ್ ಗೆ ಬಂದಾಗ ಯುವತಿಯನ್ನು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಈ ಸಂದರ್ಭ ಯುವಕ ಯುವತಿಗೆ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿರುತ್ತಾನೆ. ಗಮನಿಸಿದ ಯುವತಿ ಆಕ್ಷೇಪಿಸಿ ಆತನ ಕೈಯಿಂದ ಮೊಬೈಲ್ ಕಸಿದುಕೊಂಡು ಫೋಟೋ ಕ್ಲಿಕ್ಕಿಸಿದ್ದನ್ನು ನೋಡಿ ಗಾಬರಿಯಿಂದ ಆತನ ಮೊಬೈಲ್ ನಲ್ಲಿದ್ದ ಫೋಟೋ ಗಳನ್ನು ಡಿಲೀಟ್ ಮಾಡಿದ್ದಾಳೆ. ಬಳಿಕ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಯುವತಿಯ ಮನೆಯವರು ಪೋಲಿಸ್ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ.

- Advertisement -

Related news

error: Content is protected !!