Saturday, June 13, 2026
spot_imgspot_img
spot_imgspot_img

ಪುತ್ತೂರು: ಹಳೆ ವೈಷಮ್ಯ ಹಿನ್ನೆಲೆ ವ್ಯಕ್ತಿಗೆ ತಂಡದಿಂದ ಹಲ್ಲೆ..!

- Advertisement -
- Advertisement -

ಪುತ್ತೂರು: ವ್ಯಕ್ತಿಯೋರ್ವರಿಗೆ ಹಳೆ ವೈಷಮ್ಯದ ಹಿನ್ನೆಲೆ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಳಮೊಗ್ರು ಉಳಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನ ಮೇರೆಗೆ ನಾಶೀರ್, ಇರ್ಷಾದ್, ಸಫ್ಘಾನ್, ಮುಸ್ತಫಾ, ರಶೀದ್, ಜಾಫರ್, ಕಬೀರ್, ನಾಶೀರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಬ್ದುಲ್ ರಹಿಮಾನ್ ಜೂ. 30 ರಂದು ರಾತ್ರಿ ಇಬ್ರಾಹಿಂ ಕಲೀಲ್ ರವರ ಸ್ಕೂಟರಿನಲ್ಲಿ, ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಎಂಬಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರನ್ನು ನಾಶೀರ್, ಇರ್ಷಾದ್, ಸಫ್ಘಾನ್, ಮುಸ್ತಾಫ, ರಶೀದ್, ಜಾಫರ್, ಕಬೀರ್ ಮತ್ತು ನಾಶೀರ್ ಎಂಬವರು ತಡೆದು ನಿಲ್ಲಿಸಿ, ಬೈದು, ದೂಡಿ ಹಾಕಿರುತ್ತಾರೆ. ಬಳಿಕ ಎಲ್ಲರು ಗುಂಪು ಸೇರಿ ಹಲ್ಲೆ ನಡೆಸಿದ್ದು, ಹಲ್ಲೆಗೆ ಹಳೆಯ ವೈಷಮ್ಯ ಕಾರಣವೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!