ಭೂಗತ ಪಾತಕಿ ಕಲಿ ಯೋಗೇಶ್ ಎಂಟ್ರಿ….!


ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ ರಾವ್ ಓರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಪ್ರಕರಣಕ್ಕೆ ಈಗ ಭೂಗತ ಪಾತಕಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬನ ಎಂಟ್ರಿಯಾಗಿದೆ. ‘ಟಿವಿ9’ ಪ್ರತಿನಿಧಿಗೆ ಭೂಗತ ಪಾತಕಿ ಕಲಿ ಯೋಗೇಶ್ ಎಂಬ ಹೆಸರಿನಲ್ಲಿ ವ್ಯಕ್ತಿಯೋರ್ವ ಕರೆ ಮಾಡಿ, ಯುವತಿ ಜತೆ ಆರೋಪಿಯ ಮದುವೆ ಮಾಡಿಸಿದ್ದರೆ ಆತ ಜೈಲಿನಿಂದ ಹೊರಬಂದಾಗ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ನಾನು ಹೇಳುವುದು ಇಷ್ಟೇ ಎರಡು ಸಮುದಾಯದರು ಕೂತು ಮಾತನಾಡಿ ಇತ್ಯರ್ಥ ಮಾಡಿ ಯುವತಿಯೊಂದಿಗೆ ಆ ಯುವಕನ ಮದುವೆ ಮಾಡಬೇಕು. ಜೈಲಿನಿಂದ ಹೊರ ಬಂದ ಮೇಲೆ ಹಿಂದೂ ಸಂಘಟನೆಗಳು ಮುಂದೆ ನಿಂತು ಮದುವೆ ಮಾಡಿಸಲಿ. ಒಂದೇ ವೇಳೆ ಮದುವೆ ಆಗಿಲ್ಲ ಅಂದರೆ ಆರೋಪಿ ಕೃಷ್ಣ ಜೆ.ರಾವ್ಗೆ ಗುಂಡು ಹೊಡೆಯುತ್ತೇವೆ ಬದುಕುವುದೇ ಬೇಡ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಟಿವಿ9 ಪ್ರತಿನಿಧಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿಲ್ಲ. ನಂತನ ಭೂಗತ ಪಾತಕಿ ಬೆಂಗಳೂರಿನ ಟಿವಿ9 ಕಛೇರಿ ಪ್ರತಿನಿಧಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.
ಚಿತ್ರ ನಟ ಗಣೇಶ್ ಮತ್ತು ಶಿಲ್ಪಾರವರ ಮದುವೆ ಕೂಡಾ ರವಿ ಪೂಜಾರಿಯೊಂದಿಗೆ ಸೇರಿಕೊಂಡು ನಾನೇ ಮಾಡಿಸಿದ್ದು, ಇದು ಕೂಡ ಹಾಗೇ ಆಗಬೇಕು ಒಂದು ವೇಳೆ ಮಾತು ಕೇಳದಿದ್ದಲ್ಲಿ ಆತ ಜೈಲಿನಿಂದ ಹೊರಗೆ ಬಂದ ಕೂಡಲೇ ಶೂಟ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.