Tuesday, November 3, 2026
spot_imgspot_img
spot_imgspot_img

ಉಡುಪಿ : ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಮನೆ ಮನೆಗೆ ಪೊಲೀಸ್ ಎಂಬ ಪರಿಕಲ್ಪನೆಯ ವಿನೂತನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಉಡುಪಿಯಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್‌.ಗಂಗಣ್ಣನವ‌ರ್ ಹಸಿರು ಬಾವುಟ ತೋರಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೊಲೀಸ್‌ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಕ್ಕೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸುಧಾಕರ ಎಸ್‌.ನಾಯ್ಕ ಪರಮೇಶ್ವರ ಹೆಗಡೆ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಮತ್ತು ಉಡುಪಿ ಸಂಚಾರ ಠಾಣೆಯ ಎಸ್ಪಿಗಳಾದ ಭರತೇಶ್, ನಾರಾಯಣ, ಪ್ರಕಾಶ್ ಸಾಲಿಯಾನ್, ಹುಸೇನ್ ಸಾಬ್ ಮತ್ತು ಸಿಬ್ಬಂದಿ ಹಾಜರಿದ್ದರು.ಸರಕಾರ ಹೊರಡಿಸಿರುವ 27ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಉಡುಪಿ ಉಪ ವಿಭಾಗದ ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನೆಮನೆ ಪೊಲೀಸ್ ಅಭಿಯಾನ ಕೈಗೊಳ್ಳಲಾಯಿತು.

ಉಡುಪಿ ನಗರ ಠಾಣೆಯ 28, ಮಣಿಪಾಲ 45, ಬ್ರಹ್ಮಾವರ 30 ಮತ್ತು ಕೋಟ 25 ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶವನ್ನು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮನೆಯಲ್ಲಿರು ವವರ ಹೆಸರು, ಮೊಬೈಲ್ ನಂಬ್ರ ಪಡೆದುಕೊಳ್ಳಲಾಯಿತು. ಸಾರ್ವಜನಿಕರರಿಂದ ಅವರ ದೂರುಗಳನ್ನು ಮತ್ತು ಕೋರಿಕೆಗಳನ್ನು ಸ್ವೀಕರಿಸಲಾಯಿತು.

- Advertisement -

Related news

error: Content is protected !!