ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಎಎಸ್ಪಿಗೆ ಮನವಿ



ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ವಂಚಿಸಿರುವ ಯುವಕ ನಾಪತ್ತೆಯಾದ ಪ್ರಕರಣದ ಸಂತ್ರಸ್ಥೆಗೆ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದ. ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ಪುತ್ತೂರು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷರಿಗೆ ಜು 3ರಂದು ಮನವಿ ಮಾಡಿದ್ದಾರೆ.
ಪಿ.ಜಿ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ಎಂಬವರು ವಿಶ್ವಕರ್ಮ ಸಮಾಜದ ಹೆಣ್ಣು ಮಗಳನ್ನು ಅತ್ಯಾಚಾರವೆಸಗಿ, ಗರ್ಭವತಿಯನ್ನಾಗಿಸಿ ಮಗುವಿಗೆ ಜನ್ಮ ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಕೈಗೊಂಡು, ಹುಡುಗನನ್ನು ತಕ್ಷಣ ಬಂಧಿಸಿ ಅನ್ಯಾಯಕ್ಕೆ ಒಳಗಾದ ತಾಯಿ ಮತ್ತು ಮಗುವಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ತಿಳಿಸಿದ ಅವರು ನ್ಯಾಯ ಸಿಗಲು ವಿಳಂಬ ಅಥವಾ ನ್ಯಾಯ ಸಿಗದೇ ಹೋದಲ್ಲಿ ನಮ್ಮ ಸಮಾಜದ ವಿವಿಧ ಸಂಘ ಸಂಸ್ಥೆ, ಸಮಾಜದ ಬಂಧುಗಳು ಸೇರಿ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಂದ್ರ ಆಚಾರ್ಯ ಬಪ್ಪಳಿಗೆ, ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗೌರವ ಸಲಹೆಗಾರ ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರಭಾ ಹರೀಶ್ ಆಚಾರ್ಯ ಪರ್ಲಡ್ಕ, ಕಾರ್ಯಾಧ್ಯಕ್ಷ ಸಂಜೀವ ಆಚಾರ್ಯ ಕೆ. ಆರ್, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ, ಹಾರ್ದಿಕ್ ಡೈ ವರ್ಕ್ಸ್‌ನ ಜಗದೀಶ್ ಆಚಾರ್ಯ, ದಿನೇಶ್ ಆಚಾರ್ಯ ಕೆಯ್ಯರು, ರವಿ ಆಚಾರ್ಯ ಕಲ್ಲೇರಿ, ಕೀರ್ತನ್ ಆಚಾರ್ಯ ಕೋರ್ಟ್ ರಸ್ತೆ ಪುತ್ತೂರು, ಲೋಕೇಶ್ ಆಚಾರ್ಯ, ಗಣೇಶ ಆಚಾರ್ಯ, ವಾದಿರಾಜ ಆಚಾರ್ಯ, ಸಂತೋಷ್ ಆಚಾರ್ಯ, ಅಶೋಕ್ ಆಚಾರ್ಯ ಕಾರ್ಕಳ, ಜಯರಾಮ ಆಚಾರ್ಯ ಉಪ್ಪಿನಂಗಡಿ, ನಿತೇಶ್ ಆಚಾರ್ಯ, ರೋಹಿತ್ ಆಚಾರ್ಯ ಕಲ್ಲಿಮಾರ್, ರಾಜು ಆಚಾರ್ಯ ಕೋರ್ಟ್ ರಸ್ತೆ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.