Monday, June 15, 2026
spot_imgspot_img
spot_imgspot_img

ಹುಬ್ಬಳ್ಳಿ: ನೇಹಾ ಹತ್ಯೆ ಬೆನ್ನಲ್ಲೆ ಮತ್ತೊಂದು ಪ್ರಕರಣ

- Advertisement -
- Advertisement -

ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಬಂಧನ

This image has an empty alt attribute; its file name is VC_PUC_-1-819x1024.jpg

ನೇಹಾ ಪ್ರಕರಣ ಮಾಸುವ ಮುನ್ನವೇ ಅಪ್ರಾಪ್ತೆಯನ್ನು ಅನ್ಯಕೋಮಿನ ಯುವಕನೊಬ್ಬ ಗರ್ಭಿಣಿ ಮಾಡಿ ಅರೆಸ್ಟ್‌ ಆಗಿದ್ದಾನೆ.

ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೆಪ್ ಆಗಿದ್ದ ಅನ್ಯಕೋಮಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗಳನ್ನು‌ ಕಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪೋಷಕರು ಗರ್ಭಿಣಿಯಾದ ವಿಚಾರ ತಿಳಿದು ಶಾಕ್‌ ಆಗಿದ್ದಾರೆ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹುಬ್ಬಳ್ಳಿಯ ನವನಗರ ಎಪಿಎಂಸಿ ಠಾಣೆಗೆ ಪೋಷಕರು ಮೊದಲು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಾದರೂ ಎಫ್‌ಐಆರ್‌ (FIR) ದಾಖಲಾಗದ್ದಕ್ಕೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸದ್ಧಾಂಹುಸೇನ್ ಎಂದು ಗುರುತಿಸಲಾಗಿದೆ.

ಬಾಲಕಿ ಆಸ್ಪತ್ರೆಗೆ ಹೋಗಿದ್ದನ್ನು ಅರಿತ ಯುವಕ, ಆಕೆ ಕುಟುಂಬಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ.

- Advertisement -

Related news

error: Content is protected !!