Tuesday, July 21, 2026
spot_imgspot_img
spot_imgspot_img

ಪುತ್ತೂರು: ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರದಲ್ಲಿ ಶತಮಾನೋತ್ಸವ ಸಮಾರಂಭ

- Advertisement -
- Advertisement -

ಪುತ್ತೂರು: ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರದಲ್ಲಿ ಫೆ. 14 ಶನಿವಾರ ಮತ್ತು ಫೆ. 15 ಆದಿತ್ಯವಾರ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಶತಮಾನೋತ್ಸವ ಸಾಂಸ್ಕ್ರತಿಕ ಸಭಾಭವನ ಉದ್ಘಾಟನೆ, ಸಭಾ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಹಿರಿಯ ವಿದ್ಯಾಥಿಗಳಿಗೆ ಮತ್ತು ಶಿಕ್ಷಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಫೆ 14 ಶನಿವಾರದಂದು ಬೆಳಿಗ್ಗೆ ಗಂಟೆ 10.30ಕ್ಕೆ ಧ್ವಜಾರೋಹಣ ನಡೆಯಲಿದೆ. ಅಪರಾಹ್ನ 2ಗಂಟೆಗೆ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಮತ್ತು ಕೈಕಾರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ. ಸಂಜೆ ಗಂಟೆ 5.30ಕ್ಕೆ ಶತಮಾನೋತ್ಸವ ಉದ್ಘಾಟನಾ ಸಮಾರಂಭ, ರಾತ್ರಿ ಗಂಟೆ 8ಕ್ಕೆ ಕೈಕಾರ ಮಕ್ಕಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಲಾಸೌರಭ, ಗೀತ್ ಮ್ಯೂಸಿಕಲ್ಸ್ ಮಂಗಳೂರು, ಕರುಣಾಕರ್‍ ಇವರಿಂದ ದ್ವಿ ಕಂಠ ಸಿರಿಗಾಯನ, ಅಂತರಾಷ್ಟ್ರಿಯ ಖ್ಯಾತಿಯ ಕಲಾವಿದ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಲಿದೆ.

.ಫೆ15 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 10.30ಕ್ಕೆ ಶ್ರೀ ವಿಷ್ಣು ಕಲಾತಂಡ ದೂಮಡ್ಕ ಇರ್ದೆ ಇವರಿಂದ “ನೃತ್ಯ ವೈಭವ” ನಡೆಯಲಿದೆ. ಮಧ್ಯಾಹ್ನ ಗಂಟೆ 12ರಿಂದ ಸಭಾ ಕಾರ್ಯಕ್ರಮ , ಮಧ್ಯಾಹ್ನ ಗಂಟೆ 2ಕ್ಕೆ ಪಟ್ಲ ಸತೀಶ್ ಶೆಟ್ಟಿ ಹಾಗೂ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಬಳಗದವರಿಂದ ಯಕ್ಷಗಾನ ಬಯಲಾಟ ದಕ್ಷ ಯಜ್ಞ , ರಾತ್ರಿ ಗಂಟೆ 8ಕ್ಕೆ ಹಿರಿಯ ವಿದ್ಯಾರ್ಥಿಗಳು ಮತ್ತು ಬಳಗದವರಿಂದ “ಮರ್ಲ್ ಕಟ್ಟೋರ್ಚಿ” ತುಳು ಹಾಸ್ಯಮಯ ನಾಟಕ ನಡೆಯಲಿದೆ.

- Advertisement -

Related news

error: Content is protected !!