Saturday, June 28, 2025
spot_imgspot_img
spot_imgspot_img

ಪುತ್ತೂರು: ನಗರಸಭೆ ಸದಸ್ಯ ಶಕ್ತಿ ಸಿನ್ಹಾ ಹೃದಯಾಘಾತದಿಂದ ನಿಧನ..!

- Advertisement -
- Advertisement -

ಪುತ್ತೂರು: ಇಲ್ಲಿನ ನಗರಸಭೆ ಸದಸ್ಯ, ನೆಲ್ಲಿಕಟ್ಟೆ ನಿವಾಸಿ ಶಕ್ತಿ ಸಿನ್ಹಾ (66 ವ.) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪುತ್ತೂರು ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸ್ತವ್ಯ ಇರುವ ಶಕ್ತಿ ಸಿನ್ಹಾ ಅವರು ಸಕ್ರೀಯ ರಾಜಕಾರಣಿ. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ನೀಡುವವರಾಗಿದ್ದರು. ತನ್ನ ಕಿರಿಯ ಮಗಳ ಜೊತೆ ವಾಸವಾಗಿದ್ದ ಅವರಿಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಹಾದಿಯಲ್ಲಿ ಅವರು ಕೊನೆಯುಸಿರೆಳೆದರು.

ಕೆಲ ತಿಂಗಳ ಹಿಂದೆಯಷ್ಟೇ ಶಕ್ತಿ ಸಿನ್ಹಾ ಅವರ ಪತ್ನಿಯೂ ವಿಧಿವಶರಾಗಿದ್ದರು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!