Monday, June 15, 2026
spot_imgspot_img
spot_imgspot_img

ವಿಟ್ಲ :ಅಣ್ಣನಿಂದ ತಮ್ಮನಿಗೆ ಕೋಳಿಬಾಲ್‌ನಲ್ಲಿ ಇರಿತ : ಕೇಪು ಗಣೇಶನ ಸ್ಥಿತಿ ಗಂಭೀರ, ವೆನ್ಲಾಕ್ ಆಸ್ಪತ್ರೆಗೆ ರವಾನೆ

- Advertisement -
- Advertisement -

ವಿಟ್ಲ : ಅಣ್ಣನೊಬ್ಬ ತಮ್ಮನಿಗೆ ಕೋಳಿಬಾಲ್‌ನಿಂದ ಇರಿದು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಬಡೆಕೋಡಿ ಎಂಬಲ್ಲಿ ನಡೆದಿದೆ.

ಕೆ ಗಣೇಶ್ (35 ವರ್ಷ) ಎಂಬವರು ದಿನಾಂಕ:03-06-2024 ರಂದು ರಾತ್ರಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಬಡೆಕೋಡಿ ಎಂಬಲ್ಲಿ, ತನ್ನ ಮನೆಯ ಬಳಿಯಿದ್ದಾಗ, ಗಣೇಶರ ಚಿಕ್ಕಪ್ಪನ ಮಗ ಚಂದ್ರ @ ಚಂದ್ರಹಾಸನು ಯಾವುದೋ ಹಳೆಯ ದ್ವೇಷದಿಂದ ಗಣೇಶರನ್ನು ಉದ್ಧೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವ ಉದ್ದೇಶದಿಂದ ಕೋಳಿ ಬಾಳ್ ನಿಂದ ಗಣೇಶರಿಗೆ ಹಲ್ಲೆ ನಡೆಸಿರುತ್ತಾನೆ. ಆ ವೇಳೆ ಗಣೇಶರ ಪತ್ನಿ ಹಾಗೂ ತಾಯಿ ಬರುವುದನ್ನು ಕಂಡ ಆರೋಪಿ ಚಂದ್ರನು, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಣೇಶರವರಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 98/2024, ಕಲಂ: 504,324,341,307,506 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!