- Advertisement -
- Advertisement -
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅದೇ ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿ ತಾಯಿ ಸೇರಿದಂತೆ ಪುತ್ತೂರು ತಾಲೂಕ್ ನಲ್ಲಿ 5 ಮಂದಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಒಬ್ಬರು 30 ವರ್ಷದ ಸಿಬ್ಬಂದಿ ಮತ್ತು ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿ ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸಿಬ್ಬಂದಿ ಅವರ ಸಂಪ್ಯ ವಸತಿ ಗೃಹ ಹಾಗು ಮಹಿಳಾ ಸಿಬ್ಬಂದಿ ಅವರ ತಾಯಿ ಇರುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಬನ್ನೂರು ನೀರ್ಪಾಜೆ 42 ವರ್ಷದ ವ್ಯಕ್ತಿ, ತಿಂಗಳಾಡಿ ನಿಡ್ಯಾಣ ನಿವಾಸಿ 56 ವರ್ಷದ ವ್ಯಕ್ತಿ ,ಆರ್ಯಾಪು ಕಲ್ಲರ್ಪೆ ನಿವಾಸಿ 22 ವರ್ಷದ ಬಾಣಂತಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
- Advertisement -