Friday, April 26, 2024
spot_imgspot_img
spot_imgspot_img

ಪುತ್ತೂರು : ಅತ್ತ ಜೋಡಿ ಕೋಣಗಳ ಆಟ; ಇತ್ತ ಕಾರಿನಲ್ಲಿ ಜೋಡಿಗಳ ಪ್ರಣಯದಾಟ!

- Advertisement -G L Acharya panikkar
- Advertisement -

ಪುತ್ತೂರು : ಪುತ್ತೂರಿನ ಕಂಬಳ ಕೂಟದಲ್ಲಿ ಜೋಡಿ ಕೋಣಗಳು ಭರ್ಜರಿ ಓಟ ನಡೆಯುತ್ತಿದ್ದರೆ ಅತ್ತ ಕಂಬಳ ಜರಗುವ ಗದ್ದೆಯಲ್ಲಿ ಮಟ ಮಟ ಮಧ್ಯಾಹ್ನ ಬಿಸಿಲಿನಲ್ಲಿ ಕಾರೊಂದರಲ್ಲಿ ಜೋಡಿಗಳ ಪ್ರಣಯದಾಟ ನಡೆಯುತಿತ್ತು.

ಇದನ್ನು ಕಂಡ ಸಾರ್ವಜನಿಕರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದರು. ಮಾ. 13 ರಂದು ಪುತ್ತೂರಿನ ಕೋಟಿ ಚೆನ್ನಯ ಕಂಬಳ ಅದ್ದೂರಿಯಾಗಿ ನಡೆಯುತ್ತಿತ್ತು. ಊರು ಪರವೂರಿನಿಂದ ಲಕ್ಷಾಂತರ ಜನ ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ವೀಕ್ಷಿಸಲು ಬಂದಿದ್ದರು.

ಮಂಗಳೂರು ರಿಜಿಸ್ಟ್ರೇಷನ್ ನ ಕೆಂಪು ಬಣ್ಣದ ರೆನಾಲ್ಟ್ ಕ್ವಿಡ್ ಕಾರಿನೊಳಗೆ ಜೋಡಿಹಕ್ಕಿಗಳು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸುತ್ತಿದ್ದರು.

.
ಇದನ್ನು ಕಂಡ ಸಾರ್ವಜನಿಕರು ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡು, ಮಹಿಳಾ ಪೊಲೀಸ್ ಠಾಣೆಗೆ ಜೋಡಿಯನ್ನು ಪುತ್ತೂರು ಮಹಿಳಾ ಪೊಲೀಸರಿಗೆ ಒಪ್ಪಿಸಿದರು. ಇವರು ಕಾಲೇಜೊಂದರ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!