



ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ನಿವಾಸಿ ಬೆನ್ನಿ ಪೀಟರ್ ಮಸ್ಕರೇನ್ಹಸ್ ಇವರ ಪುತ್ರ, ಸೇಡಿಯಾಪು ಕೋಸ್ಟಲ್ ಕೊಕನಟ್ ಇಂಡಸ್ಟ್ರಿಯ ಮಾಲಕ, ಪುತ್ತೂರು ಲುಂಗಿ ಫ್ರೆಂಡ್ಸ್ ನ ಸದಸ್ಯರೂ ಆಗಿರುವ ಡೆನ್ನಿಸ್ ಮಸ್ಕರೇನ್ಹಸ್ ಮತ್ತು ತೆಲ್ಮಾ ಡೆನ್ನಿಸ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಬೆಳ್ಳಿಹಬ್ಬವನ್ನು ತಮ್ಮ ಸ್ನೇಹಿತರ ಬಳಗ ಲುಂಗಿ ಫ್ರೆಂಡ್ಸ್ ವತಿಯಿಂದ ಜ.2ರಂದು ಸೇಡಿಯಾಪು ‘ಪ್ರೊವಿಡೆನ್ಸ್’ ಮನೆಯಲ್ಲಿ ಆಚರಣೆ ಮಾಡಲಾಯಿತು. ಡೆನ್ನಿಸ್, ತೆಲ್ಮಾ ದಂಪತಿಗಳನ್ನು ಲುಂಗಿ ತಂಡವು ಗೌರವಿಸಿ, ಕೇಕ್ ತುಂಡರಿಸೋ ಮೂಲಕ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿ ಆನಂತರ ಸಿಹಿ ಹಂಚಿ ಸಂಭ್ರಮಿಸಿತು.
ಕಾರ್ಯಕ್ರಮವನ್ನು ಮಂಗಳೂರು ಸೈಂಟ್ ಆಲೋಷಿಯಸ್ ಕಾಲೇಜಿನ ವೈಸ್ ಚಾನ್ಸೆಲರ್ ರೆ.ಫಾ.ಡಾ.ಪ್ರವೀಣ್ ಮಾರ್ಟೀಸ್ , ದೀಪ ಬೆಳಗಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಂಗಳೂರು ಬೀರಿ ಸೈಂಟ್ ಆಲೋಷಿಯಸ್ ಇನ್ಸಿಟ್ಯೂಟ್ ಆಫ್ ಮ್ಯಾನೇಜೆಂಟ್ ಆಂಡ್ ಇನ್ನಾರ್ಮೇಷನ್ ಟೆಕ್ನಾಲಾಜಿ ಡೈರೆಕ್ಟರ್ ಫಾ.ಡಾ. ಕಿರಣ್ ಕೋತ , ಮತ್ತು ಕಾಲೇಜಿನ ಕಾರ್ಯಕ್ರಮದ ಸಂಯೋಜಕರಾದ ಫಾ.ಮನೋಜ್, ಮಂಗಳೂರು ಸೈಂಟ್ ಆಲೋಷಿಯಸ್ ಗೋಂಝಾಗಾ ಸ್ಕೂಲ್ ನ ಪ್ರಾಂಶುಪಾಲರಾದ ಫಾ.ರೋಹನ್ ಡಿ , ಡೆನ್ನಿಸ್ ಮಸ್ಕರೇನ್ಹಸ್ ಅವರ ಸಹೋದರ ಗಿಲ್ಬರ್ಟ್ ಮಸ್ಕರೇನಸ್, ಫರ್ಲಾ ಅವರ್ ಲೇಡಿ ಆಫ್ ವೈಲಂಕಣಿ ಚರ್ಚ್ ನ ಪಾದ್ರಿ ಫಾ.ಮಾರ್ಕ್ ಅರುಣ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್ ನ ಧರ್ಮಗುರುಗಳಾದ ಫಾ. ಬಾಲ್ತಝಾರ್ ಪಿಂಟೋ ಹಾಗೂ ಡಿಕನ್ ಡೇನಿಯಲ್ ಹೋರ್ಥ ಇವರೆಲ್ಲರೂ ಉಪಸ್ಥಿತರಿದ್ದರು.
ಕುಟುಂಬದ ಸದಸ್ಯರೊಂದಿಗೆ ಎಲ್ಲರೂ ಜತೆಗೂಡಿ ಸಹಭೋಜನ ನಡೆಸಿದರು.ಈ ವೇಳೆ ಲುಂಗಿ ಫ್ರೆಂಡ್ಸ್ ತಂಡದ ಪದಾಧಿಕಾರಿಗಳಾದ ಸೋಜಾ ಮೆಟಲ್ ಮಾರ್ಟ್ ಮಾಲಕ ಜೋನ್ ಕುಟಿನ್ಹಾ, ಲುಂಗಿ ಫ್ರೆಂಡ್ಸ್ ತಂಡದ ಸಂಚಾಲಕ ಹಾಗು ವಿಶ್ವೇಶ್ವರ ಸ್ಟೀಲ್ ಆ್ಯಂಡ್ ಹಾರ್ಡೋರ್ ಮಾಲಕರಾದ ಸುಧೀರ್ ಶೆಟ್ಟಿ ತೆಂಕಿಲ, ಪ್ರಗತಿಪರ ಕೃಷಿಕ ನಹುಷ ಭಟ್, ನ್ಯಾಯವಾದಿ ಕೆ.ಭಾಸ್ಕರ ಕೋಡಿಂಬಾಳ, ಉದ್ಯಮಿಗಳಾದ ವಿಶ್ವನಾಥ ಶೆಟ್ಟಿ, ರಮೇಶ್ ಪಿ ನಾಯಕ್, ವಿಕ್ರಂ ಶೆಟ್ಟಿ ಅಂತರ ಮತ್ತು ಸುಧೀರ್ ಶೆಟ್ಟಿ ಪಂಜಳ, ಹರಿಪ್ರಸಾದ್ ಬೊಳುವಾರು, ವಿನೀತ್ ಶೆಟ್ಟಿ ಮತ್ತು ವಿಶಾಂತ್ ಶೆಟ್ಟಿ ಸಹೋದರರು, ರೊನಾಲ್ಡ್ ಮಸ್ಕರೇನ್ಹಸ್ ಸೇಡಿಯಾಪು, ಚಂದ್ರಶೇಖರ ಕಲ್ಲಗುಡ್ಡೆ ಸಮೃದ್ಧಿ,ಡೆನ್ನಿಸ್ ಮಸ್ಕರೇನ್ಹಸ್ ರವರ ಸಹೋದರಿ ಫಿಲೋಮಿನಾ ಮಸ್ಕರೇನ್ಹಸ್ ಮಾವ ಮಾರ್ಸೆಲ್ ವೇಗಸ್ ಸೇರಿದಂತೆ ಕುಟುಂಬ ವರ್ಗದವರು ಕೂಡ ಸಂಭ್ರಮದಲ್ಲಿ ಪಾಲ್ಗೊಂಡರು.ಮಕ್ಕಳಾದ ಮೆರಾಯಿನ್ ಇಂಜಿನಿಯರ್ ಡೀಲನ್ ಮಸ್ಕರೇನ್ಹಸ್, ಇನ್ನೋರ್ವ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಡಿನೋಲ್ ಮಸ್ಕರೇನ್ಹಸ್ ಹಾಗೂ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಪುತ್ರಿ ಡಿಯೋನ್ನಾ ಮಸ್ಕರೇನ್ಹಸ್ ಸಹಕಾರ ನೀಡಿ, ಡೆನ್ನಿಸ್ ತೆಲ್ಮಾ ಮಸ್ಕರೇನ್ಹಸ್ ದಂಪತಿಗಳು ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.








