- Advertisement -
- Advertisement -






ಪುತ್ತೂರು: ಚಾಲಕ ಅಸ್ವಸ್ಥಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಹಿಮ್ಮುಖವಾಗಿ ಚಲಿಸಿ ಅಂಗಡಿಗಳಿಗೆ ನುಗ್ಗಿದ್ದು, ವ್ಯಕ್ತಿ ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಪುತ್ತೂರಿನ ಕಿಲ್ಲೆ ಮೈದಾನದ ಬಳಿ ನಡೆದಿದೆ.
ಕಿಲ್ಲೆ ಮೈದಾನದ ಒಳಗೆ ನಿಲ್ಲಿಸಿದ್ದ ಕಾರನ್ನು ಹೊರ ತೆಗೆಯುವ ವೇಳೆ ಚಾಲಕ ಅಸ್ವಸ್ಥಗೊಂಡಿದ್ದರು. ಈ ಸಂದರ್ಭ ಕಾರು ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿದ್ದ ತಾತ್ಕಾಲಿಕ ಅಂಗಡಿಗೆ ಡಿಕ್ಕಿಯಾಗಿದೆ. ಅಂಗಡಿಯಲ್ಲಿದ್ದ ರಮೇಶ್ ಮತ್ತು ಮಹಿಳೆಯೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -