Thursday, June 18, 2026
spot_imgspot_img
spot_imgspot_img

ಪುತ್ತೂರು: ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಪುತ್ತೂರು ಮೂಲದ ಬಾಲಕಿ ಆಯ್ಕೆ

- Advertisement -
- Advertisement -

ಪುತ್ತೂರು: ಅಸ್ಸಾಂ ರಾಜ್ಯದ ಗುವಾಹಟೆಯಲ್ಲಿ ಅ.8ರಿಂದ 16ರ ತನಕ ನಡೆಯಲಿರುವ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಪಿ 2023-24 ಕ್ರಿಕೇಟ್ ಪಂದ್ಯಾಟದಲ್ಲಿ ಆಡಲು ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಮೂಲದ ಶ್ರೀನಿತಿ ಪಿ.ರೈ ಅವರು ಆಯ್ಕೆಗೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಆಯ್ಕೆಯಾಗಿದ್ದು, ಮುಂಬರುವ ಅಕ್ಟೋಬರ್ 8 ರಿಂದ 16ರ ವರೆಗೆ ಗುಹವಾಟೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಿಕಿ ಪ್ರಸಾದ್ ನಾಯಕಿಯಾಗಿರುವ ಕರ್ನಾಟಕ ತಂಡದಲ್ಲಿ ಶ್ರೀನಿತಿ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನ ಅಕ್ಷಯನಗರದಲ್ಲಿರುವ ಸೈಂಟ್ ಆನ್ಸ್ ಐಸಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಶ್ರೀನಿತಿಯವರು ಪುತ್ತೂರಿನ ಸಾಲ್ಮರ ಕರೆಮೂಲೆ ನಿವಾಸಿ, ಪ್ರಸ್ತುತ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರುವಿನ ಹೆಮ್ಮೆತ್ತಾಳು ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಬಿ.ಜಿ.ಪ್ರಕಾಶ್ ರೈ ಹಾಗೂ ಪುತ್ತೂರು ತಾಲೂಕಿನ ನುಳಿಯಾಲು ವಿನುತಾ ಪ್ರಕಾಶ್ ರೈ ದಂಪತಿ ಪುತ್ರಿ.

- Advertisement -

Related news

error: Content is protected !!