Tuesday, April 16, 2024
spot_imgspot_img
spot_imgspot_img

ಅನ್ಯಮತೀಯ ಪ್ರಚೋದನಾ ಶಕ್ತಿಗಳ ಅಟ್ಟಹಾಸವನ್ನು ಹಿಂದೂ ಜಾಗರಣ ವೇದಿಕೆ ಯಾವತ್ತು ಸಹಿಸುವುದಿಲ್ಲ ಇದಕ್ಕೆ ಸರಿಯಾದ ಉತ್ತರವನ್ನು ಮುಂದಿನ ದಿನಗಳಲ್ಲಿ ಸಂಘಟನೆ ನೀಡಲಿದೆ-ಅಜಿತ್ ರೈ

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂದು ಐಕ್ಯತಾ ಸಮಾವೇಶದಲ್ಲಿ ಭಾಷಣಕಾರ ಜಗದೀಶ್ ಕಾರಂತರವರು ತನ್ನ ಭಾಷಣದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿ ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಕೇಸು ದಾಖಲಿಸುವಂತೆ ಪುತ್ತೂರು ಮುಸ್ಲಿಂ ಸಮುದಾಯದ ನಿಯೋಗ ಮಾ.೨೫ ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾರಂತರವರು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸು ದಾಖಲಿಸುವ ಅವಕಾಶ ಇದ್ದರೂ ದಾಖಲಿಸದೆ ಅವರ ದಿವ್ಯಮೌನವು ಇಲ್ಲಿನ ಶಾಂತಿಪ್ರಿಯರಾದ ನಮಗೆ ಖೇದಕರವಾಗಿರುತ್ತದೆ, ಆದುದರಿಂದ ಕಳೆದ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಎಲ್ಲಾ ಪುತ್ತೂರಿನ ಮುಸ್ಲಿಂ ಸಮುದಾಯದ ಸಂಘ ಸಂಸ್ಥೆಯ ನಾಯಕರು ಮಸೀದಿಯ ಅಧ್ಯಕ್ಷರು ರಾಜಕೀಯ ನಾಯಕರು ವಕೀಲರ ನಿಯೋಗವು ಸೇರಿದಂತೆ ಪುತ್ತೂರು ಉಪ ಪೋಲಿಸ್ ಅಧೀಕ್ಷರಿಗೆ ಜಗದೀಶ್ ಕಾರಂತ ಮತ್ತು ಸಂಘಟಕರ ಮೇಲೆ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಬಗ್ಗೆ ಜಗದೀಶ್ ಕಾರಂತರವರ ವಿರುದ್ಧ ಹಾಗೂ ಕೆಲ ಸಂಘಟಕರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಹಿಂ.ಜಾ.ವೇ ಜಿಲ್ಲಾ ಪ್ರಧಾನಕಾರ್ಯದರ್ಶಿ ಅಜಿತ್ ರೈ ಹೊಸಮನೆ: ಮೊನ್ನೆ 21ನೇ ತಾರೀಕಿನಂದು ಪುತ್ತೂರಿನಲ್ಲಿ ನಡೆದ ಹಿಂದೂ ಐಕ್ಯತಾ ಸಮಾವೇಶವು ಇಡೀ ಹಿಂದೂ ಸಮಾಜದ ಒಗ್ಗಟ್ಟಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ ಜನಸಾಗರವೇ ಸಾಕ್ಷಿ ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು ಎನ್ನುವ ಸಂದೇಶವನ್ನು ಸಾರಿದ ಸಮಾವೇಶ ಹಿಂದೂ ಸಮಾಜದ ಐಕ್ಯತೆಗೆ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.ಇದನ್ನು ಸಹಿಸದ ಅನ್ಯಮತೀಯ ಶಕ್ತಿಗಳು ಕೋಮು ಭಾವನೆಯನ್ನು ಕೆರಳಿಸುವ ರೀತಿಯಿಂದ ವರ್ತಿಸುತ್ತಿದ್ದು ಯಾವುದೋ ಒಂದು ತಲ್ಲಿ ಅರ್ಜಿಯ ಮೂಲಕ ಇದಕ್ಕೆ ಮಸಿಬಳಿಯುವ ಪ್ರಯತ್ನವನ್ನು ಮಾಡುತ್ತಿದೆ. ಈ ಕಾರ್ಯಕ್ರಮದ ಯಶಸ್ವಿಯೇ ಅನ್ಯಮತೀಯರ ಮತ್ಸರಕ್ಕೆ ಕಾರಣವಾಗಿದೆ.

ಈ ಕಾರ್ಯಕ್ರಮ ಮುಗಿದು ಇವತ್ತಿಗೆ ನಾಲ್ಕು ದಿನವಾದರೂ ಪುತ್ತೂರಿನ ಸುತ್ತಮುತ್ತ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ ಮುಂದೆ ನಡೆಯುವುದಿಲ್ಲ ಎಲ್ಲವೂ ಶಾಂತರೀತಿಯಿಂದ ಯಾರ ಭಾವನೆಗೂ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕಾರ್ಯಕ್ರಮ ನಡೆದಿಲ್ಲ. ಆದ್ದರಿಂದ ಹಿಂದೂ ಸಮಾಜದ ಶಕ್ತಿಯನ್ನ ಮನಗಂಡ ಅನ್ಯಮತೀಯರು ಸಮಾಜದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತಿದ್ದು ಖಂಡಿತವಾಗಿ ಹಿಂದೂಸಮಾಜದ ಶಕ್ತಿ ಕುಗ್ಗುವುದಿಲ್ಲ. ಬಲಿಷ್ಠ ಶಕ್ತಿಯಾಗಿ ಎದ್ದುನಿಂತು ಸವಾಲನ್ನು ಸ್ವೀಕರಿಸಿ ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ಹಿಂದೂ ಸಮಾಜಕ್ಕೆ ಇದೆ.

ಅನ್ಯಮತೀಯ ಪ್ರಚೋದನಾ ಶಕ್ತಿಗಳ ಅಟ್ಟಹಾಸವನ್ನು ಹಿಂದೂ ಜಾಗರಣ ವೇದಿಕೆ ಯಾವತ್ತು ಸಹಿಸುವುದಿಲ್ಲ ಇದಕ್ಕೆ ಸರಿಯಾದ ಉತ್ತರವನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸಂಘಟನೆ ನೀಡಲಿದೆ ಎಂದು ಅಜಿತ್ ರೈ ಎಚ್ಚರಿಸಿದರು.

driving
- Advertisement -

Related news

error: Content is protected !!