


ಪುತ್ತೂರು: ಹೊಸಮನೆ ಕ್ರಿಕೆಟರ್ಸ್ (ರಿ.) ಪುತ್ತೂರು ಪ್ರಸ್ತುತಪಡಿಸುವ ಆರ್ಯಾಪು ಪ್ರೀಮರ್ ಲೀಗ್ 2025 ಆಮಂತ್ರಣ ಬಿಡುಗಡೆ ಸಮಾರಂಭ ಮತ್ತು ’ಎಪಿಲ್ ಪ್ಲೇಯರ್ ಆಕ್ಷನ್ 2025’ ಜ. 5ನೇ ಸಂಜೆ 5.00 ಗಂಟೆಗೆ ಮಹಾವೀರ ವೆಂಚರ್ಸ್ ಹೋಟೆಲ್ & ರೆಸಾರ್ಟ್ಸ್ ಪುತ್ತೂರು ಇಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪುತ್ತೂರು ವಾಣಿಜ್ಯೋದ್ಯಮಿ ಸಹಜ್ ರೈ, ರಾಮದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಬಿಲ್ಲವ ಸಂಗ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಪ್ಯ ವಿಷ್ಣುಮೂರ್ತಿ ತಂಡದ ಮಾಲಕ ಡಾ. ಸುರೇಶ್ ಪುತ್ತೂರಾಯ, ಹೊಸಮನೆ ಕ್ರಿಕೆಟರ್ಸ್ ತಂಡದ ಮಾಲಕರು ಗಂಗಾಧರ ಅಮೀನ್ ಹೊಸಮನೆ, ಪುತ್ತೂರು ರತ್ನ ಶ್ರೀ ತಂಡದ ಮಾಲಕ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಶ್ರೀದತ್ತ್ ಕ್ರಿಕೆಟರ್ಸ್ ತಂಡದ ಮಾಲಕರು ನಿತಿನ್ ಪಕ್ಕಳ, ಆರ್ಯನ್ ಮಾನ್ಸ್ಟರ್ ಮೇರ್ಲ ತಂಡದ ಮಾಲಕ ಸಂತೋಷ್ ಸುವರ್ಣ ಮೇರ್ಲ, ಸ್ವರ್ಣ ಶ್ರೀಕರ್ಸ್ ತಂಡದ ಮಾಲಕ ಸುರೇಶ್ ಪೆಲತ್ತಡಿ, ಕರಪಾಡಿ ತಂಡದ ಮಾಲಕ ಬಾಲಚಂದ್ರ ದೇವಸ್ಯ, ಎಸ್‌ಕೆಸಿ ಪುತ್ತೂರು ತಂಡದ ಮಾಲಕ ಪ್ರೀತಂ ಮೇರ್ಲ, ಮರಕ್ಕ ಚಾಲೆಂಜರ್ಸ್ ತಂಡದ ಮಾಲಕ ನರೇಂದ್ರ ನಾಯಕ್ ಮರಕ್ಕ, ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ (ಆರ್.) ಪುತ್ತೂರು ತಂಡದ ಮಾಲಕ ಶರತ್ ಆಳ್ವ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.