Friday, March 29, 2024
spot_imgspot_img
spot_imgspot_img

ಪುತ್ತೂರು ಜಾತ್ರೆಯಲ್ಲಿ ಹಿಂದೂ ಭಾಂದವರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ

- Advertisement -G L Acharya panikkar
- Advertisement -

ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಸಂತೆ ಏಲಂ ನಲ್ಲಿ ಹಿಂದೂ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 2022 ನೇ ಸಾಲಿನ ವಾರ್ಷಿಕ ಜಾತ್ರೆಯು 10-04-2022ರ ವರೆಗೂ ನಡೆಯಲಿದ್ದು, ಈ ಸಂಬಂಧ ತಾತ್ಕಾಲಿಕ ಸಂತೆ ಏಲಂ ಪ್ರಕಟಣೆಯನ್ನು ನ್ಯೂಸ್ ಪೇಪರ್ ಗಳಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಸಂತೆ ಏಲಂನಲ್ಲಿ ಹಿಂದೂ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ಉಲ್ಲೇಖಿಸಲಾಗಿದೆ.

ದೇವಳದ ಎದುರು ಭಾಗದ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿ ವ್ಯಾಪಾರಿಗಳಿಗೆ ದೇವಳದ ಕಚೇರಿಯಿಂದ ಸೂಚಿಸಿದ ಪ್ರಕಾರ ಗುರುತಿಸಿದ ಜಾಗವನ್ನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ದಿನಾಂಕ 29-03-2022 ರಂದು ಮಂಗಳವಾರ ಪೂರ್ವಾಹ್ನ 11 -00 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಏಲಂ ಮಾಡಲಾಗುವುದು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಇರುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

- Advertisement -

Related news

error: Content is protected !!