- Advertisement -
- Advertisement -



ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರದ 55ನೇ ವರ್ಷದ ಮಹಾಗಣೇಶೋತ್ಸವದ ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನವು ಆದಿತ್ಯವಾರ(ಆ.16) ದಂದು ನಡೆಯಿತು.
ಈ ಅಭಿಯಾನದಲ್ಲಿ ಸಮಿತಿಯ ಅಧ್ಯಕ್ಷರಾದ ತಿಮ್ಮಪ್ಪ ಮಂಜಪಾಲು, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ ಉರಿಮಜಲು ಹಾಗೂ ಲಕ್ಷ್ಮೀ ಉರಿಮಜಲು, ಕಾರ್ಯದರ್ಶಿ ಜಗದೀಶ ನೂಜಿ ಮತ್ತು ಕೋಶಾಧಿಕಾರಿ ಧನರಾಜ್ ಅಮೈ ಹಾಗೂ ಸಮಿತಿಯ ಸದಸ್ಯರು ಮತ್ತು ಊರಿನ ಯುವಕರು, ತಾಯಂದಿರು-ಮಕ್ಕಳು ಒಟ್ಟಾಗಿ ಪಾಲ್ಗೊಂಡು ಊರಿನ ಎಲ್ಲಾ ಮನೆಗಳಿಗೆ ಆಮಂತ್ರಣ ಪತ್ರಿಕೆಗಳನ್ನು ವಿತರಿಸಿದರು.
- Advertisement -








