Tuesday, April 30, 2024
spot_imgspot_img
spot_imgspot_img

ಪುತ್ತೂರು KSRTC ಬಸ್‌ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರರ ಹೆಸರಿಡಲು ಅನುಮೋದನೆ ನೀಡಿದ ಸರ್ಕಾರ

- Advertisement -G L Acharya panikkar
- Advertisement -

ಪುತ್ತೂರು: ಇನ್ಮುಂದೆ ಪುತ್ತೂರು ಕೆಎಸ್‌ಆರ್‌ಟಿಸಿಗೆ ಬಸ್‌ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರಪುತ್ರರ ಹೆಸರಿನಲ್ಲಿ “ಕೋಟಿ-ಚೆನ್ನಯ” ಬಸ್ ನಿಲ್ದಾಣ ಎಂಬುದಾಗಿ ನಾಮಕರಣ ಮಾಡಲು ಸರ್ಕಾರದ ಅನುಮೋದನೆ ನೀಡಿದೆ.

ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಕ್ಕೆ ‘ಕೋಟಿ ಚೆನ್ನಯ ಬಸ್ ನಿಲ್ದಾಣ’ ಎಂದು ನಾಮಕರಣ ಮಾಡುವ ಕುರಿತು ಪುತ್ತೂರು ನಗರ ಸಭೆ, ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕ.ರಾ.ರ.ಸಾ.ನಿಗಮದ ನಿರ್ದೇಶಕ ಮಂಡಳಿಯಲ್ಲಿ ಅನುಮೋದನೆ ನೀಡಿರುವ ದಾಖಲೆಗಳನ್ನು ಸಲ್ಲಿಸಿ, ಸದರಿ ಪ್ರಸ್ತಾವನೆಗೆ ಪೂರ್ವಾನುಮೋದನೆ ನೀಡುವಂತೆ ಕೋರಿದ್ದರು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿ, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾ ಣಕ್ಕೆ “ಕೋಟಿ ಚೆನ್ನಯ ಬಸ್ ನಿಲ್ದಾಣ” ಎಂದು ನಾಮಕರಣ ಮಾಡಲು ಸರ್ಕಾರದ ಅನುಮೋದನೆ ನೀಡಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಈ ಹಿಂದೆ ಪಡುಮಲೆ ಕೋಟಿ ಚೆನ್ನಯ್ಯ ಸಂಚಲನ ಟ್ರಸ್ಟ್‌ ನಿಯೋಗದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಗ್ಗೆ ಮನವಿ ನೀಡಲಾಗಿತ್ತು.

- Advertisement -

Related news

error: Content is protected !!