- Advertisement -
- Advertisement -





ಪುತ್ತೂರು: ಜಮೀನು ವಿಚಾರದಲ್ಲಿ ನಡೆದಿದ್ದ ಕುಟುಂಬದೊಳಗಿನ ತಕರಾರು ಹಲ್ಲೆಗೆ ತಿರುಗಿದ ಘಟನೆ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಉರುವದಲ್ಲಿ ನಡೆದಿದೆ.
ಪ್ರಕರಣದ ದೂರುದಾರರಾದ ಪುತ್ತೂರು ನಿವಾಸಿ ಮಮ್ತಾಜ್ (32) ಅವರ ದೂರಿನಂತೆ, ಅವರ ತಂದೆ ಹಾಗೂ ಅಣ್ಣ ಕಲಂದರ್ ಶಾಫಿ ಅವರ ನಡುವೆ ಜಮೀನು ಸಂಬಂಧಿತ ವಿವಾದವಿದ್ದು, ಅದು ಪ್ರಸ್ತುತ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಮಾರ್ಚ್ 15ರಂದು ಬೆಳಿಗ್ಗೆ, ಮಮ್ತಾಜ್ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಆರೋಪಿತ ಕಲಂದರ್ ಶಾಫಿ ಕತ್ತಿಯೊಂದಿಗೆ ಸ್ಥಳಕ್ಕೆ ಬಂದು ಅವ್ಯಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ, ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಹಲ್ಲೆಯಿಂದ ಮಮ್ತಾಜ್ ಕೈಗೆ ಗಾಯವಾಗಿರುತ್ತದೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 45/2026 ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 352, 351(3), 118(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -








