



ಪುತ್ತೂರು: ನಗರಸಭೆಯ ಅಧ್ಯಕ್ಷರ ವಿರುದ್ಧ ಪುತ್ತೂರು ಶಾಸಕರ ಆಪ್ತ ಬಂಟನಾಗಿರುವ ಅದ್ದು ಪಡೀಲ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಪೋಸ್ಟ್ ಹಂಚಿರುವುದನ್ನು ಕಠೋರವಾಗಿ ಖಂಡಿಸಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿರುತ್ತಾರೆ.
ಭಾರತೀಯ ಜನತಾ ಪಾರ್ಟಿಯ ಇದನ್ನು ಸಮರ್ಥಿಸುತ್ತದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಅವರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ವಿಧಾನ ಪರಿಷತ್ ಸದಸ್ಯರಿಗೆ ಪ್ರಭುದ್ಧತೆಯ ಪಾಠ ಹೇಳಿಕೊಡಲು ಬಂದಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಪಳಗಿ ಬಂದವರು ಯಾರಿಗೆ ಯಾವ ರೀತಿ ಗೌರವ ನೀಡಬೇಕು , ಯಾರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದನ್ನು ಎಳವೆಯಿಂದಲೇ ಕರಗತ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಹೊಡೆಬಡಿ ಸಂಸ್ಕೃತಿ ಯಾರದ್ದು ಎಂಬುದಕ್ಕೆ ಜಿಲ್ಲಾ ಕಾಂಗ್ರೆಸ್ ಕಛೇರಿಯೇ ಸಾಕ್ಷಿಯಾಗಿದೆ. ರಿವಾಲ್ವ್ ರ್ ಹಿಡಿದು ಬೆದರಿಕೆ ಒಡ್ಡುವ ಸಂಸ್ಕೃತಿ , ನಮ್ಮ ಕಾರ್ಯಕರ್ತರ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ್ದ ಪ್ರವೃತ್ತಿ ಯಾರದ್ದು? ಕಾಂಗ್ರೆಸ್ ಪಕ್ಷದ ನಾಯಕರಿಂದ ಈ ಬೋಧನೆ ಭೂತದ ಬಾಯಿಯಿಂದ ಭಗವದ್ಗೀತೆ ಕೇಳಿದಂತಾಗುತ್ತದೆ. ಹಿಂದಿನ ಕಾಲದಿಂದಲೂ ಪುತ್ತೂರಿನ ಜನತೆ ಕಾಂಗ್ರೆಸ್ ಸಂಸ್ಕೃತಿ ಏನೂ ಎಂಬುದನ್ನು ಅರಿತುಕೊಂಡಿದ್ದಾರೆ ಅದಕ್ಕೆ ಉತ್ತರವನ್ನು ಕೊಡುತ್ತಾರೆ. ನಿಮಗೆ ತಾಕತ್ತಿದ್ದರೆ ನಿಮಗೆ ನಿಜವಾಗಿಯೂ ಮಹಿಳೆಯರ ಬಗ್ಗೆ , ದಲಿತರ ಬಗ್ಗೆ ಕಾಳಜಿ ಇರುವುದೇ ಆಗಿದ್ದರೆ ನೀವಾಗಲೀ , ನಿಮ್ಮ ಶಾಸಕರಾಗಲೀ ಅದ್ದು ಪಡೀಲ್ ಮಾಡಿರುವ ಕೃತ್ಯವನ್ನು ಬಹಿರಂಗವಾಗಿ ಖಂಡಿಸಬೇಕಿತ್ತು. ಅದನ್ನು ಬಿಟ್ಟು ವಿಧಾನಪರಿಷತ್ ಸದಸ್ಯರ ಹೇಳಿಕೆಯನ್ನು ಖಂಡಿಸಿರುವುದು ಮತಾಂಧ ಶಕ್ತಿಗಳ ಮೇಲಿರುವ ಪ್ರೀತಿಯ ದ್ಯೋತಕವಾಗಿದೆ. ಈ ನಡೆ ಕಾಂಗ್ರೆಸ್ ಗೆ ಮಹಿಳೆಯರ ಮೇಲೆ ಇರುವ ನಿಜವಾದ ಕಾಳಜಿ ಏನೂ ಎಂಬುದನ್ನು ತೋರಿಸುತ್ತದೆ. ಭಾರತೀಯ ಜನತಾ ಪಾರ್ಟಿಯ ಪ್ರಮುಖರಿಗೆ ಭೋದನೆ ಮಾಡುವ ಮೊದಲು ಕಾಂಗ್ರೆಸ್ ನಾಯಕರು ನಾಲಿಗೆಯನ್ನು ಹಿಡಿತದಲ್ಲಿರಿಸುವಂತೆ ನೋಡಿಕೊಳ್ಳಲಿ. ಕೆಣಕಿದರೆ ಬಿಡುವ ಮಾತೇ ಇಲ್ಲ , ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನು ಕಲಿತುಕೊಂಡು ಬಂದಿದ್ದೇವೆ. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳುವುದು ಎಂದು ನಾನು ಭಾವಿಸುತ್ತೇನೆ.