Tuesday, July 8, 2025
spot_imgspot_img
spot_imgspot_img

ಪುತ್ತೂರು: ದೇರ್ಲ ಮುತ್ತಪ್ಪ ರೈ ಸ್ಮರಣಾರ್ಥ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಹಾರಥೋತ್ಸವದ ದಿನ ಅನ್ನಸಂತರ್ಪಣೆ

- Advertisement -
- Advertisement -

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವರ ಸದ್ಭಕ್ತರಾಗಿದ್ದ ದೇರ್ಲ ಮುತ್ತಪ್ಪ ರೈ ಅವರು ಅಗಲಿ ನಾಲ್ಕು ವರ್ಷಗಳು ಕಳೆದಿದೆ. ಮಹಾಲಿಂಗೇಶ್ವರನ ಪರಮ ಭಕ್ತ, ಬ್ರಹ್ಮರಥ ದಾನಿ ಮುತ್ತಪ್ಪ ರೈ ಯವರ ನೆನಪಿಗೆ ಅವರ ಸಹೋದರಿ-ಸಹೋದರರು ಮತ್ತು ಮಕ್ಕಳು ಸೇರಿ ಪ್ರತಿವರ್ಷ ಮಹಾರಥೋತ್ಸವದ ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡುವ ಸಂಕಲ್ಪ ಮಾಡಿದ್ದು, ಪ್ರತಿ ವರ್ಷ ಏಪ್ರಿಲ್ 17ನೇ ತಾರೀಕು ಮುತ್ತಪ್ಪ ರೈಯವರ ನೆನಪಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯಲಿದೆ ಹಾಗೂ ಇದು ಮುಂದಿನ ವರ್ಷಗಳಲ್ಲಿ ನಿರಂತರ ಮುಂದುವರೆಯಲಿದೆ. ಎಲ್ಲರೂ ಈ ಕಾರ್ಯದಲ್ಲಿ ಭಾಗವಹಿಸಿ, ಅಂದು ತಪ್ಪದೇ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಬೇಕು ಎಂದು ಮುತ್ತಪ್ಪ ರೈ ದೇರ್ಲ ಅವರ ಸಹೋದರಿ, ಸಹೋದರರು ಮತ್ತು ಮಕ್ಕಳು ಮತ್ತು ದೇರ್ಲ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!