Tuesday, June 9, 2026
spot_imgspot_img
spot_imgspot_img

ಪುತ್ತೂರು-ಮಂಗಳೂರು ನಾನ್‍ ಸ್ಟಾಪ್ ಎಕ್ಸ್ ಪ್ರೆಸ್ ಬಸ್ ಆರಂಭ..!

- Advertisement -
- Advertisement -

ನೂತನ ಬಸ್ ವ್ಯವಸ್ಥೆಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ

ಪುತ್ತೂರು: ಪುತ್ತೂರು-ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರ ಪ್ರಾರಂಭಗೊಂಡಿದ್ದು, ಶಾಸಕ ಅಶೋಕ್ ಕುಮಾರ್ ರೈ ನೂತನ ಬಸ್ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಿದರು.

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಪುತ್ತೂರಿನಿಂದ 5. ಸುಳ್ಯದಿಂದ 2 ಬಸ್‌ಗಳು ಪುತ್ತೂರು ಎಕ್ಸ್‌ಪ್ರೆಸ್ ಆಗಿ ಸೇವೆ ನೀಡಲಿದೆ. ಸುಳ್ಯದಿಂದ ಬೆಳಗ್ಗೆ ಬರುವ 2 ಬಸ್ ಪುತ್ತೂರಿನಿಂದ ಎಕ್ಸ್‌ಪ್ರೆಸ್ ಆಗಿ ಸಂಚರಿಸಲಿದೆ. ಪುತ್ತೂರಿನಿಂದ 29. ಸ್ಟೇಟ್ ಬ್ಯಾಂಕ್‌ನಿಂದ 29 ಟ್ರಿಪ್ ಸಂಚರಿಸಲಿದೆ. ಈ ಮಾರ್ಗದ ನಡುವೆ ಎಲ್ಲಿಯೂ ನಿಲ್ಲದೆ ನೇರ ಸಂಚಾರ ಇರಲಿದೆ. ಇದರಿಂದ ಕ್ಲಪ್ತ ಸಮಯದಲ್ಲಿ ಪುತ್ತೂರಿನಿಂದ ಮಂಗಳೂರು, ಮಂಗಳೂರಿನಿಂದ ಪುತ್ತೂರಿಗೆ ತಲುಪಬಹುದು. ಈ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣಿಸುವವರಿಗೆ (ಮಹಿಳಾ ಪ್ರಯಾಣಿಕರಿಗೆ ಉಚಿತ) ವೇಗದೂತ ಪ್ರಯಾಣ ದರ ಇರಲಿದೆ.

ಪುತ್ತೂರಿನಿಂದ ಮಂಗಳೂರಿಗೆ ಹೊರಡುವ ಸಮಯ: 7:00, 7:20, 7:40, 8:00, 8:20, 8:4, 9:00, 9:40, 10:00, 10:20, 10:40,11:00, 11:20,12:10,1:20,1:30,1:40,1:50, 2:00, 3:00, 3:30, 4:10, 4:20, 4:30, 4:40, 4:50, 6:15, 6:30, 6:40, 7:10, 7:30

ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ಹೊರಡುವ ಸಮಯ: 5:50, 6:00, 6:20, 8:20, 8:40, 9:00, 9:20, 9:40, 10:00, 10:40, 11:00, 11:20, 11:40, 12:00,12:20,1:00, 1:50, 2:50, 3:00, 3:10, 3:20, 3:30, 5:00, 5:20,5:30, 5:50, 6:00, 6:10, 6:20

- Advertisement -

Related news

error: Content is protected !!