Sunday, June 7, 2026
spot_imgspot_img
spot_imgspot_img

ಪುತ್ತೂರು: ಕ್ರೈಸ್ತ ದಫನ ಭೂಮಿಯಲ್ಲಿ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು; ದೂರು ದಾಖಲು

- Advertisement -
- Advertisement -

ಪುತ್ತೂರು: ಕ್ರೈಸ್ತ ದಫನ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ ಘಟನೆ ಪುತ್ತೂರಿನ ಆನೆಮಜಲು ಪರಿಸರದಲ್ಲಿ ನಡೆದಿದೆ.

ಪುತ್ತೂರಿನ ಆನೆಮಜಲು ಪರಿಸರದಲ್ಲಿ ಫಾ: ಬಾಲ್ತಿಜಾರ್ ಪಿಂಟೋ, ಧರ್ಮ ಗುರುಗಳು, ಸಂತ ಅಂತೋಣಿ ಚರ್ಚ್, ಬನ್ನೂರು ಎಂಬವರ ಅಧೀನದಲ್ಲಿರುವ ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿರುವ ಬಗ್ಗೆ ಜೂ.14ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಕೃತ್ಯವನ್ನು ನಡೆಸಿದ ದುಷ್ಕರ್ಮಿಗಳ ಪತ್ತೆಗಾಗಿ ವಿಚಾರಣೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!