- Advertisement -
- Advertisement -
ಪುತ್ತೂರು: ಚಿಕ್ಕಮಗಳೂರು ನಗರಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ(ಪರಿಸರ) ಕರ್ತವ್ಯ ನಿರ್ವಹಿಸುತ್ತಿರುವ ಮಧು ಎಸ್.ಎಂ.ರವರನ್ನು ಪುತ್ತೂರು ನಗರಸಭಾ ಪೌರಾಯುಕ್ತರಾಗಿ ವರ್ಗಾವಣೆಗೊಳಿಸಲು ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ.

ನಾಲ್ಕೂವರೆ ವರ್ಷ ಪುತ್ತೂರು ನಗರಸಭೆಯಲ್ಲಿ ಪೌರಾಯುಕ್ತರಾಗಿರುವ ರೂಪಾ ಶೆಟ್ಟಿಯವರು ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ನೇಮಕ ನಡೆದಿದ್ದು, ಮೇ.27ರಂದು ಮಧುಮನೋಹರ್‌ರವರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಇವರು ಮಂಗಳೂರು ಮಹಾನಗರ ಪಾಲಿಕೆಯಿಂದ ಮುಂಭಡ್ತಿ ಹೊಂದಿ ಚಿಕ್ಕಮಗಳೂರು ನಗರಸಭೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.

2016ರಲ್ಲಿ ಆಗಸ್ಟ್ 27ರಂದು ಪುತ್ತೂರಿಗೆ ವರ್ಗಾವಣೆಗೊಂಡಿದ್ದ ರೂಪಾ ಶೆಟ್ಟಿಯವರು ಸುಧೀರ್ಘ ನಾಲ್ಕೂವರೆ ವರ್ಷ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.



- Advertisement -