Wednesday, July 22, 2026
spot_imgspot_img
spot_imgspot_img

ಪುತ್ತೂರು: (ನ.19) ವಾಜಪೇಯಿಯವರು 1991ರಲ್ಲಿ ಪುತ್ತೂರಿನಲ್ಲಿ ಭಾಷಣ ಮಾಡಿದ ಜಾಗದಲ್ಲೇ ಅಟಲ್ ವಿರಾಸತ್ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 100 ನೇ ವರ್ಷದ ಜನ್ಮಶತಾಬ್ದಿ ಹಿನ್ನಲೆಯಲ್ಲಿ ನವೆಂಬರ್ 19 ರಂದು ಅಟಲ್ ವಿರಾಸತ್ ಕಾರ್ಯಕ್ರಮ ಪುತ್ತೂರು ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಅತಿಥಿ, ಗಣ್ಯರ ಜತೆ ಸಾವಿರಾರು ಕಾರ್ಯಕರ್ತರ ಮೆರವಣಿಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ನಳಿನ್ ಕುಮಾರ್‌ ಕಟೀಲ್‌, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಕರಾವಳಿಯ ಬಿಜೆಪಿ ಶಾಸಕರು ಸೇರಿದಂತೆ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜನಸಂಘ ಕಾಲದಿಂದಲೇ ಸಂಘಟನೆಗೆ ಶ್ರಮಿಸಿದ ಪಕ್ಷದ ಹಿರಿಯರನ್ನು ಗುರುತಿಸಿ ಗೌರವಿಸಲಾಗುತ್ತದೆ. ಬೆಳಗ್ಗೆ ಸಮಾವೇಶ ಆರಂಭಕ್ಕೆ ಮುನ್ನ ಗಾಯಕ ರವೀಂದ್ರ ಪ್ರಭು ತಂಡದಿಂದ ದೇಶಭಕ್ತಿ ಗೀತೆ ಗಾಯನ ನಡೆಯಲಿದೆ.

- Advertisement -

Related news

error: Content is protected !!