Thursday, July 23, 2026
spot_imgspot_img
spot_imgspot_img

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಸಭೆ

- Advertisement -
- Advertisement -

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲಿಜನ್‌ನ ತಿಂಗಳ ಸಭೆಯು ಸಚ್ಚಿದಾನಂದ ಸೇವಾ ಸದನ ವಿನಾಯಕ ನಗರ ದರ್ಬೆ ಪುತ್ತೂರು ಇಲ್ಲಿ ನಡೆಯಿತು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಸಭಾಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳ ಬಗ್ಗೆ ರೂಪರೇಷೆ ಮಾಡಲಾಯಿತು. ಎಸ್ ಸಿ ಐ ನಿರ್ದೇಶಕಿ ಆಶಾಲತಾ ಸೀನಿಯರ್ ವಾಣಿ ವಾಚಿಸಿದರು. ಕೋಶಾಧಿಕಾರಿ ಸುಮಂಗಲ ಶಣೈ ಪ್ರಾರ್ಥಿಸಿದರು. ಸಭಾಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಕಾರ್ಯಕ್ರಮವನ್ನು ಸುಸ್ಥಿತಿಗೆ ತಂದರು. ಎಸ್ ಸಿ ಐ ಕಾರ್ಯದರ್ಶಿ ರೋಹಿಣಿ ಆಚಾರ್ಯ ವರದಿ ವಾಚಿಸಿದರು. ಮುಂದೆ ಮಾಡುವ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು.

ಶಾಲಾ ಪ್ರಾರಂಭೋತ್ಸವ, ಪುಸ್ತಕ ನೀಡುವುದರ ಕುರಿತು ಚಂದ್ರಕಾಂತ, ಮಹಾಲಿಂಗ ನಾಯ್ಕ ವಿವಿಧ ಅನಿಸಿಕೆ ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಅನ್ನಪೂರ್ಣಿಮ ಆರ್ ರೈ, ಪುರುಷೋತ್ತಮ ಶೆಟ್ಟಿ ಹೇಗೆ ಎಲ್ಲಿ ಮಾಡುವುದೆಂಬ ಅಭಿಪ್ರಾಯಗಳೊಂದಿಗೆ ವಿಚಾರ ವ್ಯಕ್ತಪಡಿಸಿದರು. ಶಾರದಾ ಪ್ರಭು ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಅಧ್ಯಕ್ಷೆ ಅವರಿಗೆ ಹೂ ನೀಡಿ ಅಭಿನಂದಿಸಿದರು. ಲಕ್ಕಿ ಡ್ರಾ ವಿಜೇತೆ ಆಶಾಲತಾ ಅವರಿಗೆ ಮಲ್ಲಿಕಾ ಜೆ ರೈ ಯವರು ಸ್ಮರಣಿಕೆ ಬಹುಮಾನ ನೀಡಿದರು. ಸ್ಥಳ ಹಾಗೂ ಉಪಹಾರದ ಪ್ರಾಯೋಜಕ ಚಂದ್ರಕಾಂತ್ ರವರನ್ನು ಮಲ್ಲಿಕಾ ಜೆ ರೈ ಯವರು ಸ್ಮರಣಿಕೆ ಬಹುಮಾನ ನೀಡಿ ಕೃತಜ್ಞತೆ ವ್ಯಕ್ತಪಡಿಸಿದರು. ಮಾಸ್ಟರ್ ಹಿಮಂತ್ ಛಾಯಾಗ್ರಹಣ ಮಾಡಿದುದ್ದಕ್ಕೆ ಹೂ ನೀಡಿ ಅಭಿನಂದನೆ ತಿಳಿಸಲಾಯಿತು. ರಾಷ್ಟ್ರಗೀತೆ ಹಾಡುವುದರ ಮೂಲಕ ಈ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

- Advertisement -

Related news

error: Content is protected !!