Saturday, April 20, 2024
spot_imgspot_img
spot_imgspot_img

ಪುತ್ತೂರು: ಪುರುಷರಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ! – ಕಾರ್ಯಚರಣೆಗಿಳಿದ ಅರಣ್ಯ ಇಲಾಖೆ

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರು ತಾಲೂಕಿನ ಪುರುಷರ ಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಲಾಗಿದೆ.ಪುರುಷರಕಟ್ಟೆಯ ನಡುಗುಡ್ಡೆ ಚಂದಪ್ಪ ಪೂಜಾರಿ ಅವರ ಜಾಗದಲ್ಲಿ ಚಿರತೆ ಹಾದುಹೋಗಿದೆ.

ಸ್ಥಳದಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. ಸರ್ವೆ ,ಮುಂಡೂರು,ಬನ್ನೂರು,ಪಡೀಲ್,ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಪಾಲ್ತಾಡಿ,ಚೆನ್ನಾವರ,ಬಂಬಿಲ ಸೇರಿದಂತೆ ಕೆಲವು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿನ್ನೆ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಮುಕ್ವೆ ಮೊಗೇರಡ್ಕ ಎಂಬಲ್ಲಿ ಬೋನು ಅಳವಡಿಸಿದ್ದಾರೆ. ಈ ಮೂಲಕ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಮೊಗೇರಡ್ಕ ಎಂಬಲ್ಲಿ ಪೊದೆಗಳು ಹೆಚ್ಚು ಇರುವ ನಿರ್ಜನ ಪ್ರದೇಶದಲ್ಲಿ ಈ ಬೋನು ಅಳವಡಿಸಲಾಗಿದೆ. ಚಿರತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದ್ದು ಜನತೆ ಕೂಡಾ ಭಯಭೀತರಾಗಿದ್ದಾರೆ.

- Advertisement -

Related news

error: Content is protected !!