- Advertisement -
- Advertisement -





ಪುತ್ತೂರು: ಎರಡು ದಿನದ ಹಿಂದೆ ವಿಷಪದಾರ್ಥ ಸೇವಿಸಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ನ.4ರಂದು ರಾತ್ರಿ ಮೃತಪಟ್ಟಿದ್ದಾರೆ.
ಮೃಥಪಟ್ ಮಹಿಳೆಯನ್ನು ಕೊಡಿಪ್ಪಾಡಿ ನಿವಾಸಿ ಮನೋಜ್ ಅವರ ಪತ್ನಿ ಶ್ರುತಿ(35) ಎಂದು ಗುರುತಿಸಲಾಗಿದೆ.
ನ.3ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.4ರಂದು ರಾತ್ರಿ ಮೃತಪಟ್ಟಿದ್ದಾರೆ. ಮೃತರು ಗಂಡ ಮನೋಜ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
- Advertisement -








