Sunday, May 12, 2024
spot_imgspot_img
spot_imgspot_img

ಝೀ ಕನ್ನಡ ಸರಿಗಮಪ-20 ಮೆಗಾ ಆಡಿಷನ್‌ನಲ್ಲಿ ಪುತ್ತೂರಿನ ಸಮನ್ವಿ ರೈ ಆಯ್ಕೆ

- Advertisement -G L Acharya panikkar
- Advertisement -

ಅದ್ಭುತ ಗಾಯನದ ಮೂಲಕ ಜಡ್ಜಸ್ ಮನ ಒಲಿಸಿದ ಕರಾವಳಿಯ ಗಾನ ಕೋಗಿಲೆ

ಉತ್ತಮ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಇದೀಗ ಸರಿಗಮಪ ಸೀಸನ್ 20 ಆರಂಭವಾಗುತ್ತಿದ್ದು, ಈ ಬಾರಿ ಕನ್ನಡದ ಸ್ವರ ಸಂಭ್ರಮ ಈಗ ವಿಶ್ವ ಸಂಭ್ರಮವಾಗುತ್ತಿದೆ. ಹೌದು ಸರಿಗಮಪ 20ನೇ ಸೀಸನ್ ತುಂಬಾ ವಿಶೇಷತೆಯಿಂದ ಕೂಡಿರಲಿದೆ. ಇಷ್ಟು ದಿನ ರಾಜ್ಯಾದ್ಯಂತ ಸುತ್ತಿ, ಪ್ರತಿಭೆಗಳನ್ನು ಹುಡಕಿ ಹಾಡುವವರಿಗೆ ಅವಕಾಶ ಕೊಡ್ತಾ ಇದ್ರು. ಈ ಬಾರಿ ವಿಶ್ವ ಕನ್ನಡಿಗರಿಗಾಗಿ ಸರಿಗಪಮ ಶೋ ನಡೆಸಿದ್ದಾರೆ.

ವಿಶ್ವದಾದ್ಯಂತ ನಡೆಸಿದ ಆಡಿಷನ್‌ಗಳಲ್ಲಿ ಸುಮಾರು 1 ಲಕ್ಷ ಹಾಡುಗಾರರು ಭಾಗವಹಿಸಿದ್ದರು. ಈ ಪೈಕಿ ಟಾಪ್ 20 ಸಂಗೀತ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿತ್ತು. ಮೆಗಾ ಆಡಿಷನ್‌ನಲ್ಲಿ ಜೀ ಕನ್ನಡದ ವೇದಿಕೆ ಹತ್ತಿ, ಮೊದಲ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಅದ್ಭುತ ಗಾಯನದ ಮೂಲಕ ತೀರ್ಪುಗಾರರಿಂದ ಮೆಚ್ಚುಗೆ ಪಡೆದು ಆಯ್ಕೆಯಾದವರು ನಮ್ಮ ಕರಾವಳಿಯ ಬಹುಮುಖ ಪ್ರತಿಭೆ ಸಮನ್ವಿ ರೈ ಪುತ್ತೂರು.

ಈ ಮೂಲಕ ಪುತ್ತೂರಿನ ಕೀರ್ತಿಯನ್ನು ಗಾಯನದ ಮೂಲಕ ವಿಶ್ವಕ್ಕೆ ಪರಿಚಯಿಸಿ ಸಮನ್ವಿ ರೈಯವರು ಮೂಲತಃ ಪುತ್ತೂರಿನ ಬೆಟ್ಟಂಪ್ಪಾಡಿ ನಿವಾಸಿ. ಇದೀಗ ಸಾಪ್ಟ್ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸಮನ್ವಿ ರೈಯವರು ಬಾಲ್ಯದಲ್ಲೇ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಸಮನ್ವಿ ರೈಯವರು ವಿದ್ವಾನ್ ದಿ. ಕಾಂಚನ ನಾರಾಯಣ ಭಟ್ ಹಾಗೂ ವಿದೂಷಿ ವೀಣಾ ರಾಘವೇಂದ್ರರವರಿAದ ಶಾಸ್ತಿçÃಯ ಸಂಗೀತ ತರಭೇತಿ ಪಡೆದಿರುತ್ತಾರೆ.

ತುಳು, ಕನ್ನಡ, ಹಿಂದಿ, ಹಾಗೂ ತೆಲುಗು ಸೇರಿದಂತೆ ಸುಮಾರು 4 ಭಾಷೆಗಳಲ್ಲಿ ಸುಮಧುರವಾಗಿ ಹಾಡಬಲ್ಲ ಸಮನ್ವಿ ರೈಯವರು ಖ್ಯಾತ ಸಂಗೀತ ಗಾಯಕ ಆರ್ಯಭಟ ಪ್ರಶಸ್ತಿ ವಿಜೇತ ಜಗದೀಶ್ ಆಚಾರ್ಯರವರ ಸಂಗೀತ ತಂಡದಲ್ಲಿ ಸುಮಾರು 5 ವರ್ಷಗಳಿಂದ ಅದ್ಭುತ ಗಾಯಕಿಯಾಗಿ ಜನಮನ್ನಣೆ ಗಳಿಸಿದ್ದಾರೆ.

ತಮ್ಮ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಪ್ರಿಯದರ್ಶಿನಿ ಹೈಯರ್ ಪ್ರೈಮರಿ ಸ್ಕೂಲ್ ಬೆಟ್ಟಂಪಾಡಿಯಲ್ಲಿ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ಮಾಡಿರುತ್ತಾರೆ. ಬಳಿಕ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿAಗ್ & ಟೆಕ್ನಾಲಜಿ, ಪುತ್ತೂರಿನಲ್ಲಿ ಇಂಜಿನಿಯರಿAಗ್ ವಿದ್ಯಾಭ್ಯಾಸವನ್ನು ಮುಗಿಸಿರುತ್ತಾರೆ.

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ ಮತ್ತು ಸವಿತಾ ಎ. ರೈ ದಂಪತಿಯ ಪುತ್ರಿ ಸಮನ್ವಿ ರೈಯವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಯಕ್ಚಗಾನ ಕ್ಷೇತ್ರದಲ್ಲೂ ಮಿಂಚಿದ ಕಲಾವಿದೆ. ಅದಲ್ಲದೆ ‘ಕಟೀಲು ಶ್ರೀದೇವಿ ಚರಿತೆ’ ಮತ್ತು ‘ಕೋಟಿ-ಚೆನ್ನಯ’ ಧಾರವಾಹಿಯಲ್ಲಿ ಅಭಿನಯಿಸಿರುವ ಸಮನ್ವಿ ರೈ ಬಹುಮುಖ ಪ್ರತಿಭೆಯಾಗಿ ಕರಾವಳಿ ಸೇರಿದಂತೆ ಹೊರ ರಾಜ್ಯ- ದೇಶಗಳಲ್ಲಿ ಗುರುತಿಸಿಕೊಂಡವರು.

- Advertisement -

Related news

error: Content is protected !!