Saturday, May 15, 2021
spot_imgspot_img
spot_imgspot_img

ಪುತ್ತೂರು: ಕೋವಿಡ್ ಲಾಕ್ ಡೌನ್ ನಡುವೆ ಕೋಳಿ ಅಂಕ; ನಗದು ಸಹಿತ ಐವರು ಆರೋಪಿಗಳು ಪೊಲೀಸ್ ವಶಕ್ಕೆ!

- Advertisement -
- Advertisement -

ಪುತ್ತೂರು: ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿ ರವಿವಾರ ರಾತ್ರಿ ಕೋವಿಡ್ ಲಾಕ್ ಡೌನ್ ನಡುವೆ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಕೋಳಿಗಳ ಸಹಿತ ನಗದು ವಶಪಡಿಸಿಕೊಂಡಿದ್ದಾರೆ.

ನಿಷೇಧಾಜ್ಞೆಯ ನಡುವೆ ಬಲ್ನಾಡುವಿನ ಸರ್ಕಾರಿ ಜಾಗದಲ್ಲಿ ರವಿವಾರ ರಾತ್ರಿ ಕೋಳಿ ಅಂಕ ಆಯೋಜಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಬಲ್ನಾಡು ನಿವಾಸಿಗಳಾದ ಲಿಂಗಪ್ಪ ಮೂಲ್ಯ, ಸಂಜೀವ, ನಾರಾಯಣ ನಾಯ್ಕ, ಚಂದ್ರ ಶೇಖರ ಗೌಡ, ಸುಮಂತ್ ಎಂಬವರನ್ನು ಬಂಧಿಸಿದ್ದಾರೆ.

ಅಂಕಕ್ಕೆ ಬಳಸಲಾಗುತ್ತಿದ್ದ ಏಳು ಹುಂಜಗಳು ಹಾಗೂ ರೂ. 7,820 ನಗದನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆಗೆ ಇತರ ಆರೋಪಿಗಳು ಪರಾರಿಯಾಗಿದ್ದಾರೆ.

ಗ್ರಾಮಾಂತರ ಎಸ್ಸೈ ಉದಯರವಿ ನೇತೃತ್ವದಲ್ಲಿ ಪ್ರೊಬೇಷನರಿ ಎಸೈ ಶ್ರೀಕಾಂತ್ ರಾಥೋಡ್ ಮತ್ತು ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!