Wednesday, June 17, 2026
spot_imgspot_img
spot_imgspot_img

ಲಸಿಕೆ.. ನನಗೂ, ನನ್ನ ಹೆಂಡತಿಗೂ ಬೇಡ; ಆಧಾರ್ ಕಾರ್ಡ್ ಹಿಡಿದು ಮರವೇರಿ ಕುಳಿತ ಕನ್ವರ್ ಲಾಲ್

- Advertisement -
- Advertisement -

ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಪಟಾಂಕಲಾನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೊರೊನಾ ಲಸಿಕೆಯ ಬೇಡ ಎಂದು ಮರವೇರಿ ಕುಳಿತಿದ್ದು, ಆ ದಿನದ ಕೋವಿಡ್ ಲಸಿಕೆ ಶಿಬಿರ ಪೂರ್ಣಗೊಳ್ಳುವವರೆಗೂ ಕೆಳಗಿಳಿಯಲು ನಿರಾಕರಿಸಿದ್ದಾನೆ.

ನನಗೆ ಮತ್ತು ನನ್ನ ಹೆಂಡತಿಗೆ ಲಸಿಕೆ ಬೇಡ ಎನ್ನುತ್ತಾ ಪತ್ನಿಯ ಆಧಾರ್ ಕಾರ್ಡ್ ಹಿಡಿದು ಮರವೇರಿ ಕುಳಿತಿದ್ದಾನೆ. ಕೋವಿಡ್ ಲಸಿಕೆ ಶಿಬಿರ ನಡೆಸಲು ಆರೋಗ್ಯ ಇಲಾಖೆ ತಂಡ ಗ್ರಾಮ ತಲುಪಿದ್ದು, ಗ್ರಾಮಸ್ಥರೆಲ್ಲರನ್ನು ಲಸಿಕೆ ಕೇಂದ್ರಕ್ಕೆ ಕರೆಸಲಾಯಿತು. ಅದರಂತೆ ಗ್ರಾಮದ ನಿವಾಸಿ ಕನ್ವರ್ ಲಾಲ್ ಕೂಡ ಕೇಂದ್ರಕ್ಕೆ ಆಗಮಿಸಿದರು. ಲಸಿಕೆಗಳನ್ನ ನೀಡುವುದನ್ನ ಕಂಡು ಭಯಭೀತನಾದ ಕನ್ವರ್ ಲಾಲ್ ಡೋಸ್ ತೆಗೆದುಕೊಳ್ಳಲು ನಿರಾಕರಿಸಿದರು.

ಕನ್ವರ್ ಲಾಲ್ ಲಸಿಕೆ ಕೇಂದ್ರದ ಬಳಿ ಇರುವ ಮರವನ್ನ ಹತ್ತಿ, ದಿನದ ಲಸಿಕೆ ಶಿಬಿರ ಪೂರ್ಣಗೊಳ್ಳುವವರೆಗೂ ಅಲ್ಲಿಯೇ ಕುಳಿತಿದ್ದಾನೆ. ಆತನ ಹೆಂಡತಿ ಲಸಿಕೆಯನ್ನ ತೆಗೆದುಕೊಳ್ಳಲು ಒಪ್ಪಿದರೂ, ಆಕೆಯ ಆಧಾರ್ ಕಾರ್ಡ್ ನೀಡಲು ನಿರಾಕರಿಸಿ, ಲಸಿಕೆ ಹಾಕಿಸಿಕೊಳ್ಳಬೇಡ ಎಂದು ಒತ್ತಾಯಿಸಿದ್ದಾನೆ.

- Advertisement -

Related news

error: Content is protected !!