Monday, June 15, 2026
spot_imgspot_img
spot_imgspot_img

ಪುತ್ತೂರು: ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು!

- Advertisement -
- Advertisement -

ಪುತ್ತೂರು: ಇಲ್ಲಿನ ನಿಡ್ಪಳ್ಳಿ ಗ್ರಾಮದ ಮಾರ್ಲಕುಮೇರು ಎಂಬಲ್ಲಿ ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೆ.30ರಂದು ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ನಿಡ್ಪಳ್ಳಿ ಗ್ರಾಮದ ಮಾರ್ಲಕುಮೇರು ನಿವಾಸಿ ದಿನೇಶ್(35)ಎನ್ನಲಾಗಿದೆ.

ಮೃತರ ಪತ್ನಿ ಮಧ್ಯಾಹ್ನ ಮನೆಗೆ ಬಂದಾಗ ದಿನೇಶ್ ಅವರು ಮನೆಯ ಬಿದಿರಿನ ಅಡ್ಡಕ್ಕೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!