Monday, June 15, 2026
spot_imgspot_img
spot_imgspot_img

ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್‌ಗೆ ಒತ್ತಾಯ; ಎಸ್‌ಐಟಿಗೆ ಗಿರೀಶ್ ಮಟ್ಟಣ್ಣವರ್ ದೂರು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ತಂಡ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ‌.

ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಇಂದು (ಜೂನ್.13) ಭೇಟಿ ನೀಡಿದ ಅವರು, ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಪೊಲೀಸ್ ಭದ್ರತೆ ನೀಡಬೇಕು, ಚಿನ್ನಯ್ಯನನ್ನು ಬ್ರೈನ್ ಮ್ಯಾಪಿಂಗ್ ಮಾಡಬೇಕು. ಹೈಕೋರ್ಟ್‌ಗೆ ನೀಡಿದ ಹೇಳಿಕೆಯನ್ನು ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಿಗೆ ಕೊಡಬಾರದು ಎಂಬ ಜಾಮೀನು ಷರತ್ತು ಉಲ್ಲಂಘನೆಯಾಗಿರುತ್ತದೆ.

ಹೀಗಾಗಿ SIT ತಂಡದ ನ್ಯಾಯವಾದಿಗಳು ಚಿನ್ನಯ್ಯನ ಜಾಮೀನು ರದ್ದತಿ ಅರ್ಜಿ ಸಲ್ಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ʼಜೊತೆಗೆ ನೇರಪ್ರಸಾರದ ಮೂಲಕ ನನ್ನನ್ನು ಕೂಡ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಲಿʼ ಮಾಧ್ಯಮಗಳಿಗೆ ಗಿರೀಶ್ ಮಟ್ಟಣ್ಣವರ್ ಪ್ರತಿಕ್ರಿಯಿಸಿದ್ದಾರೆ.

ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಜೊತೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ, ಪ್ರಕಾಶ್.ಸಿ ಬೆಂಗಳೂರು, ಮನೋಜ್ ಕುಂಜರ್ಪ, ಪ್ರದೀಪ್ ಕುಲಾಲ್, ಗಣೇಶ್ ಶೆಟ್ಟಿ, ಉದಯ ಉಜಿರೆ, ಶ್ರೀನಿವಾಸ್ ಮತ್ತಿತರರು ಜೊತೆಯಲ್ಲಿದ್ದರು.

- Advertisement -

Related news

error: Content is protected !!