- Advertisement -
- Advertisement -
ವಿಟ್ಲ: ಸಮೀಪದ ಕೋಡಪದವು ದಿವಾಣದಲ್ಲಿ ವಾಸವಾಗಿದ್ದ ನಿವೃತ್ತ ಹಿಂದಿ ಶಿಕ್ಷಕ ಕೃಷ್ಣ ಭಟ್ಟ ಎಸ್. (80) ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ದೈಗೋಳಿ ಸಮೀಪದ ಸುಣ್ಣಂಗುಳಿ ಮನೆತನದವರಾದ ಅವರು, ಮಾಣಿಯ ಕರ್ನಾಟಕ ಹೈಸ್ಕೂಲ್‌ನಲ್ಲಿ ಹಿಂದಿ ಪಂಡಿತರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಿಕ್ಷಕರಾಗಿ ಮಾತ್ರವಲ್ಲದೆ ಪ್ರಗತಿಪರ ಕೃಷಿಕರಾಗಿಯೂ ಅವರು ಸ್ಥಳೀಯವಾಗಿ ಪರಿಚಿತರಾಗಿದ್ದರು.ಮೃತರು ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ, ಸೊಸೆ, ಅಳಿಯ ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
- Advertisement -








