ಸ್ನೇಹಿತರ ಮಧ್ಯೆ ಜಗಳ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ಸ್ನೇಹಿತರನ್ನು ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ದರ್ಶನ್, ಪ್ರಶಾಂತ್, ಲಂಕೇಶ್ ಎಂದು ಗುರುತಿಸಲಾಗಿದೆ.
ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಹಣ ನೀಡುವಂತೆ 3,000 ರೂ.ಗಳನ್ನ ಕೊಟ್ಟಿದ್ದರು. ಆದರೆ ದರ್ಶನ್ ಆ ಹಣವನ್ನ ತಾಯಿಗೆ ಕೊಡದೇ ತನ್ನ ಗೆಳೆಯರಾದ ನಿತಿನ್ ಹಾಗೂ ರಮೇಶ್ ಜೊತೆ ದರ್ಶನ್ ಪಾರ್ಟಿ ಮಾಡಲು ತೆಗೆದುಕೊಂಡು ಹೋಗಿದ್ದ. ಜೊತೆಗೆ ಆರೋಪಿಗಳಾದ ಪ್ರೀತಂ, ಯಶವಂತ, ದರ್ಶನ್, ಪ್ರಶಾಂತ್, ಮತ್ತು ಲಂಕೇಶ್ ಕೂಡ ಪಾರ್ಟಿಗೆ ಬಂದಿದ್ದರು. ಆರೋಪಿಗಳು ಮತ್ತು ದರ್ಶನ್ ಟೀಂ ಎಲ್ಲರು ಸಹ ಸ್ನೇಹಿತರು ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಜಗಳವಾಗಿದೆ.
ಬಳಿಕ ಇದೇ ವಿಷಯಕ್ಕೆ ದರ್ಶನ್ ಹಾಗೂ ಸ್ನೇಹಿತರು ರಮೇಶ್ ಅವರ ಮನೆ ಬಳಿ ಹೋಗಿದ್ದಾರೆ. ನಂತರ ರಮೇಶ್ ಮನೆ ಬಳಿ ಪ್ರೀತಂ ಅಂಡ್ ಗ್ಯಾಂಗ್ ಕೂಡ ಹೋಗಿದೆ. ಈ ವೇಳೆ ನಿತಿನ್ ಮತ್ತು ಪ್ರೀತಂ ನಡುವೆ ಜಗಳ ಶುರುವಾಗಿದೆ. ಜಗಳದಲ್ಲಿ ಪ್ರೀತಂ, ನಿತಿನ್‌ಗೆ ಹೊಡೆದಿದ್ದಾನೆ. ಇದನ್ನು ಕಂಡ ದರ್ಶನ್ ಮಧ್ಯಪ್ರವೇಶಿಸಿ, ನಿತಿನ್‌ಗೆ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಾನೆ. ಇದರಿಂದ ಇನ್ನಷ್ಟು ಕೋಪಗೊಂಡ ಪ್ರೀತಂ ಅಲ್ಲೇ ಇದ್ದ ಹಾಲೋಬ್ಲಾಕ್ ಇಟ್ಟಿಗೆಯಿಂದ ದರ್ಶನ್‌ಗೆ ಹೊಡೆದಿದ್ದಾನೆ. ಇದರಿಂದ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.