Wednesday, July 22, 2026
spot_imgspot_img
spot_imgspot_img

ಮೀಫ್ ಝಕಾತ್ ಫಂಡ್‌ನಿಂದ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

- Advertisement -
- Advertisement -

ಮಂಗಳೂರು: ಮೀಫ್ ಸಂಸ್ಥೆಯು ತನ್ನ ಝಕಾತ್ ಫಂಡ್‌ನಿಂದ ಮುಸ್ಲಿಂ ಸಮುದಾಯದ ಅತ್ಯಂತ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 2026ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಅಹ್ವಾನಿಸಿದೆ.

ಎಂಬಿಬಿಎಸ್/ಬಿಡಿಎಸ್/ಸ್ನಾತಕೋತ್ತರ/ಮೆಡಿಕಲ್/ಡೆಂಟಲ್ ಕೋರ್ಸ್‌ಗೆ ರಾಷ್ಟ್ರಮಟ್ಟದ ನೀಟ್ ರ್ಯಾಂಕ್ 30000ದೊಳಗಿರಬೇಕು.ಇಂಜಿನಿಯರಿಂಗ್ ಕೋರ್ಸ್‌ಗೆ ಸಿಇಟಿ ರ್ಯಾಂಕ್ 30000ದೊಳಗಿರಬೇಕು. ಸಿ.ಎ (ಚಾರ್ಟೆಡ್ ಅಕೌಂಟ್) ಕೋರ್ಸ್‌ಗೆ ಪಿಸಿ ನೋಂದಣಿ ಕಾರ್ಡ್ ಹೊಂದಿರಬೇಕು ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿರಬೇಕು.UPSC ಪ್ರಿಲಿಮಿನರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. KAS ಪ್ರಿಲಿಮಿನರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. NIT/IIT/IISC/IIM ಈ ಕೋರ್ಸಿಗೆ ಆಯ್ಕೆ ಹೊಂದಿರಬೇಕು.

BEd, Med ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿರಬೇಕು. LLB 3 ಅಥವಾ 5 ವರ್ಷ ಅವಧಿಯ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿರಬೇಕು.ಝಕಾತ್ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವು ಅನ್ವಯವಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಮೀಫ್ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸರಕಾರಿ ಶಾಲೆಗಳಲ್ಲಿ ಮಾಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ ಸೀಮಿತ ಸಂಖ್ಯೆಯ ಮೊತ್ತ ಮಾತ್ರ ಲಭ್ಯವಿದ್ದು, ಅರ್ಹತೆ ಆಧರಿಸಿ ಆದ್ಯತೆ ಮೇರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

ಮೀಫ್ ಸಂಸ್ಥೆಯ ಯೋಜನೆಯಡಿ ಉಚಿತ ಸೀಟು ಅಥವಾ ರಿಯಾಯಿತಿ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ. ಇತರ ಸಂಘ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ,ಉಚಿತ ಸೀಟು ಅಥವಾ ಪ್ರಾಯೋಜಕತ್ವದ ಫಲಾನುಭವಿಯಾಗಿರಬಾರದು. ಈ ಸೌಲಭ್ಯವು ಮೀಫ್ ವ್ಯಾಪ್ತಿಗೆ ಒಳಪಟ್ಟ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಅನ್ವಯಿಸುತ್ತದೆ.ಜೂ.5ರೊಳಗೆ ಅರ್ಜಿ ಸಲ್ಲಿಸಬೇಕು. NEET ಸ್ಪರ್ಧಾತ್ಮಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶದ ಬಳಿಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮೊ.ಸಂ: 8792115666, 8431990966ಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ಪಡೆಯಬಹುದು ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!