- Advertisement -
- Advertisement -
ಬಂಟ್ವಾಳ: Lions Club Buntwal ವತಿಯಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಥಮ ಉಪರಾಜ್ಯಪಾಲರಾಗಿ ಆಯ್ಕೆಯಾದ ಗೋವರ್ಧನ್ ಶೆಟ್ಟಿ ಹಾಗೂ ದ್ವಿತೀಯ ಉಪರಾಜ್ಯಪಾಲರಾಗಿ ಆಯ್ಕೆಯಾದ ವೆಂಕಟೇಶ್ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ರೋಹಿತಾಕ್ಷ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಭಾ ಹೆಬ್ಬಾರ್, ಕಾರ್ಯದರ್ಶಿ ದಿವ್ಯ ಶೆಟ್ಟಿ ಹಾಗೂ ಕೋಶಾಧಿಕಾರಿ ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.ಮಾಜಿ ರಾಜ್ಯಪಾಲ ವಸಂತ್ ಶೆಟ್ಟಿ ಹಾಗೂ ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಶುಭಾಶಯ ಕೋರಿದರು.




ಕ್ಲಬ್ಬಿನ ಸದಸ್ಯ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಅವರು ಪ್ರಥಮ ಹಾಗೂ ದ್ವಿತೀಯ ಉಪರಾಜ್ಯಪಾಲರ ಪರಿಚಯ ಮಾಡಿಕೊಟ್ಟರು. ಇನ್ನೋರ್ವ ಸದಸ್ಯ ಜಗದೀಶ್ ಎಡಪಡಿತಾಯ ವಂದಿಸಿದರು.ಇದೇ ವೇಳೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷೆ ಚಿತ್ರ ಎಡಪಡಿತಾಯ, ಕಾರ್ಯದರ್ಶಿ ಜಯಂತಿ ಪ್ರಭು ಹಾಗೂ ಕೋಶಾಧಿಕಾರಿ ಸುಮಾ ಸುನಿಲ್ ಅವರನ್ನು ಅಭಿನಂದಿಸಲಾಯಿತು.
- Advertisement -








